ಆತ್ಮಹತ್ಯೆ ಮಾಡಿಕೊಂಡ ಸೌಮ್ಯಾ 
ಜಿಲ್ಲೆ

ವಿಜಯನಗರದಲ್ಲಿ ಯುವತಿ ನೇಣುಬಿಗಿದು ಆತ್ಮಹತ್ಯೆ

ಶಿವಮೊಗ್ಗ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳು ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಗರದ ನೇತಾಜಿ ಸರ್ಕಲ್ ಸಮೀಪದ ವಿಜಯನಗರದ ಸೌಮ್ಯಾ(25) ಆತ್ಮಹತ್ಯೆ ಮಾಡಿಕೊಂಡ ಯುವತಿ.

ವಿಜಯನಗರದಲ್ಲಿ ಪಾಲಕರೊಂದಿಗೆ ವಾಸವಿದ್ದ ಸೌಮ್ಯ ಬಿಕಾಂ ಓದಿದ್ದರು. ಕಳೆದ 3 ವರ್ಷದಿಂದ ಮಾಚೇನಹಳ್ಳಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ವರ್ಕ್ ಫರ್ಮ್ ಹೋಮ್‌ನಲ್ಲಿದ್ದ ಆಕೆ ಕಳೆದ ಕೆಲ ವರ್ಷದಿಂದ ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಳು. ಪಾಲಕರು ಮೆಗ್ಗಾನ್ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಕೊಡಿಸಿದ್ದರೂ ಉಸಿರಾಟ ಸಮಸ್ಯೆ ಕಡಿಮೆಯಾಗಿರಲಿಲ್ಲ ಎನ್ನಲಾಗಿದೆ.

ಇದರಿಂದ ಮನನೊಂದಿದ್ದ ಸೌಮ್ಯ ಗುರುವಾರ ಸಂಜೆ ಮನೆಯ ರೂಮ್‌ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಕೆಲಸಕ್ಕೆಂದು ಹೋಗಿದ್ದ ಸೌಮ್ಯ ಸಹೋದರ ಹಾಗೂ ಪಾಲಕರು ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದ್ದು, ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.