ರಾಮದುರ್ಗ: ತಾಲೂಕಿನ ಗ್ರಾಮವೊಂದರಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿದ ಪ್ರಕರಣ ಶನಿವಾರ ನಡೆದಿದೆ. ಹುಸೇನಸಾಬ್ (55) ಎಂಬ ವ್ಯಕ್ತಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದು, ಯುವತಿ ಅಸ್ವಸ್ಥಳಾದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮದುರ್ಗ ವರದಿ : ತಾಲೂಕಿನ ಕಿತ್ತೂರ ಗ್ರಾಮದ ಬಳಿ ಮಾ. 24ರಂದು ಪತ್ತೆಯಾದ ಅಪರಿಚಿತ ಶವ ಗದಗ ಜಿಲ್ಲೆ ನರಗುಂದ ಪಟ್ಟಣದ ದಂಡಾಪುರ ಓಣಿಯ ಅಪ್ರಾಪ್ತ ಬಾಲಕಿಯದ್ದು ಎಂಬುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ಮಗಳು ಅಪಹರಣವಾಗಿದ್ದಾಳೆ ಎಂದು
ಪಾಲಕರು ನರಗುಂದ ಪೊಲೀಸ್ ಠಾಣೆಯಲ್ಲಿ ಮಾ. 20ರಂದು ದೂರು ದಾಖಲಿಸಿದ್ದರು. ಬಾಲಕಿ ತೊಟ್ಟ ಬಟ್ಟೆ ಸೇರಿ ಇತರ ಕುರುಹುಗಳ ಆಧಾರದ ಮೇಲೆ ಪಾಲಕರು ತಮ್ಮ ಮಗಳನ್ನು ಗುರುತಿಸಿದ್ದು, ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಚಾಲಕನೋರ್ವ ತಮ್ಮ ಮಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಆತನೇ ಕೊಲೆಗೈದಿದ್ದಾನೆ ಎಂದು ರಾಮದುರ್ಗ ಆರಕ್ಷಕ ವೃತ್ತ ನಿರೀಕ್ಷಕರಿಗೆ ಪಾಲಕರು ದೂರು ನೀಡಿದ್ದಾರೆ. ಸಿಪಿಐ ಶಶಿಕಾಂತ ವರ್ಮಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.