ಆಂಧ್ರಪ್ರದೇಶದಲ್ಲಿ ಇತ್ತೀಚಿಗೆ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಸಿಟಿಆರ್‌ಐನ ಹಿರಿಯ ವಿಜ್ಞಾನಿ ಡಾ.ಸಿ.ನಂದಾರಿಗೆ ಯುವ ವಿಜ್ಞಾನಿ ಪ್ರಶಸ್ತಿಯನ್ನು ಮಾಜಿ ಸಚಿವೆ ಪುರಂಧರೇಶ್ವರಿ ಪ್ರದಾನ ಮಾಡಿದರು.. ಸಿಟಿಆರ್‌ಐನ ಅಧಿಕಾರಿಗಳು ಇದ್ದರು. 
ಜಿಲ್ಲೆ

ಡಾ.ಸಿ.ನಂದಾಗೆ ಯುವ ವಿಜ್ಞಾನಿ ಪ್ರಶಸ್ತಿ

ಹುಣಸೂರು: ನಗರದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ದ ಹಿರಿಯ ವಿಜ್ಞಾನಿ ಡಾ.ಸಿ.ನಂದಾ ಟೊಬ್ಯಾಕೊ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಕೊಡಮಾಡುವ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಂಧ್ರಪ್ರದೇಶದ ದೇವರಪಲ್ಲಿಯಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಂಬಾಕು ಮಂಡಳಿಯ ಮಾಜಿ ಚೇರ‌್ಮನ್ ಮತ್ತು ಕೇಂದ್ರದ ಮಾಜಿ ಸಚಿವೆ ಪುರಂಧರೇಶ್ವರಿ ಅವರು ಡಾ.ಸಿ.ನಂದಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹುಣಸೂರು ಸಿಟಿಆರ್‌ಐ ಕೇಂದ್ರದಲ್ಲಿ ಎಫ್‌ಸಿವಿ(ಫೈನ್ ಕ್ಯೂರ್ಡ್‌ ವರ್ಜೀನಿಯಾ ತಂಬಾಕು) ಬೆಳೆಗಾರರ ಅನುಕೂಲಕ್ಕಾಗಿ ಆವಿಷ್ಕಾರಗೊಂಡ ಎಫ್‌ಸಿಎಚ್-248 ತಳಿಯ ಅಭಿವೃದ್ಧಿಯಲ್ಲಿ ನಂದಾ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ತಿಳಿಸಿದ್ದಾರೆ.