ಕುಣಿಗಲ್ : ಪದವಿ ಪಡೆದು ಬೇರೆಯವರ ಬಳಿ ಉದ್ಯೋಗ ಮಾಡುವ ಬದಲು ಸ್ಥಳಿಯ ಸಂಪನ್ಮೂಲ ಬಳಸಿ ಯುವಜನರು ನವೋದ್ಯಮ ಪ್ರಾರಂಭಿಸಿ ಎಂದು ತುಮಕೂರು ಸಿಡಾಕ್ ಜಂಟಿ ನಿರ್ದೇಶಕ ಎಂ.ಎಸ್.ಮಧು ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಕೋಶ, ಐ.ಕ್ಯೂ.ಎ.ಸಿ, ಸಿಡಾಕ್ ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಯ ವತಿಯಿಂದ ಗುರುವಾರ ಏರ್ಪಡಿಸಿದ್ದ ಉದ್ಯಮಶೀಲತೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಯಂ ಉದ್ಯೋಗ ಸೃಷ್ಟಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆ ಜಾರಿಗೊಳಿಸಿ ಯುವಜನರನ್ನು ಉದ್ಯಮಗಳತ್ತ ಆಕರ್ಷಿಸಿ, ಸೂಕ್ತ ಮಾರ್ಗದರ್ಶನ, ಆರ್ಥಿಕ ಸಹಕಾರ ನೀಡುತ್ತಿದೆ. ಲಭ್ಯವಿರುವ ವಿಪುಲ ಅವಕಾಶ ಬಳಸಿಕೊಂಡು ಉದ್ಯಮಿಗಳಾಗಿ ಎಂದರು.
ಯುವ ಉದ್ಯಮಿ ಪದ್ಮಶ್ರೀ ಮಾತನಾಡಿ, ಭಾರತವು ಯುವಜನರ ದೇಶವಾಗಿದ್ದು, ವಿಶ್ವದಲ್ಲೆ ಅತಿಹೆಚ್ಚಿನ ಯುವಜನರ ಹೊಂದಿದೆ. ಯುವಜನರು ಸೇವಾೇತ್ರ, ಉತ್ಪಾದನೆ, ಸಲಹೆ, ಕಿರು ಉದ್ಯಮಗಳನ್ನು ಪ್ರಾರಂಭಿಸಬೇಕು. ಮಹಿಳೆಯರು ಗೃಹ ಕೈಗಾರಿಕೆಗಳನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಬೇಕು ಎಂದರು.
ಅಧ್ಯತೆ ವಹಿಸಿದ್ದ ಪ್ರಾಂಶುಪಾಲ ರಾಮಾಂಜನಪ್ಪ ಮಾತನಾಡಿ, ಪ್ರತಿವರ್ಷ ಲಾಂತರ ಜನರು ಪದವೀಧರರಾಗತ್ತಿದ್ದು, ಎಲ್ಲರಿಗೂ ಸರ್ಕಾರ ನೌಕರಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ಯುವಜನರು ಡಿಜಿಟಲೀಕರಣದ ಅವಕಾಶ ಬಳಸಿ, ಉದ್ಯಮಶೀಲರಾಗಬೇಕು. ದುಡಿಯುವ ಕೈಗಳು ಉದ್ಯೋಗ ಸೃಷ್ಟಿಸಬೇಕು. ಸರ್ಕಾರದ ಸವಲತ್ತು ಬಳಸಿ ಸ್ವಯಂ ಉದ್ಯಮಿಗಳಾಗಿ ಎಂದರು.
ಉದ್ಯೋಗಕೋಶದ ಅಧಿಕಾರಿ ಪೊ.ಸಿ.ಆರ್.ಮನೋಜ್, ಐಕ್ಯೂಎಸಿ ಸಂಚಾಲಕ ಡಾ.ಟಿ.ಎನ್.ನರಸಿಂಹಮೂರ್ತಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಟಿ.ಕೆ.ಕೆಂಪಯ್ಯ, ಡಾ.ಎಂ.ಎಸ್.ಮೋಹನಕುಮಾರ್, ಚಂದ್ರಹಾಸ್, ನಾಗಮಣಿ ಇದ್ದರು. ಯುವ ಉದ್ಯಮಿ ಪದ್ಮಶ್ರೀ ಅವರನ್ನು ಸನ್ಮಾನಿಸಲಾಯಿತು.