ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ತಂಬಾಕುಮುಕ್ತ ಯುವ ಅಭಿಯಾನ ಜಾಗೃತಿ ಜಾಥಾಕ್ಕೆ ಎನ್‌ಸಿಡಿ ವೈದ್ಯ ರುದ್ರಮುನಿ ಗದ್ದಿ ಚಾಲನೆ ನೀಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್, ಸಾಂಕ್ರಾಮಿಕ ರೋಗ ತಜ್ಞ ಅಶೋಕ್, ಮಲೇರಿಯಾ ಮೇಲ್ವಿಚಾರಕ ಬಸವಲಿಂಗ, ಕ್ಷಯ ರೋಗ ಮೇಲ್ವಿಚಾರಕ ರವಿ ಕುಮಾರ, ವಸೀಂ ರೆಹಮಾನ್, ನಾಗರತ್ನಾ, ರೇಷ್ಮಾ ಬೇಗಂ ಇತರರಿದ್ದರು. 
ಜಿಲ್ಲೆ

ಯುವಜನತೆ ದುಶ್ಚಟಗಳಿಂದ ದೂರವಿರಲಿ

Kopala - Desk - Eraveni

ಲಿಂಗಸುಗೂರು: ಯುವಜನತೆ ಮನರಂಜನೆಗಾಗಿ ವ್ಯಸನಗಳತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎನ್‌ಸಿಡಿ ವೈದ್ಯ ರುದ್ರಮುನಿ ಗದ್ದಿ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ತಂಬಾಕುಮುಕ್ತ ಯುವ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ತಂಬಾಕು ಜಿಗಿಯುವುದು, ಧೂಮಪಾನ, ಗುಟ್ಖಾ, ನಶೆ ಸೇವನೆಯಿಂದ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಉಂಟಾಗಲಿದೆ. ಶ್ವಾಸಕೋಶ ತೊಂದರೆಯಿಂದ ಕ್ಷಯರೋಗ ಅಥವಾ ಸಾವು ಸಂಭವಿಸಬಹುದಾಗಿದೆ. ಯುವಕರು ಮನರಂಜನೆಗಾಗಿ ಕಲಿಯುವ ದುಶ್ಚಟ ಕೊನೆಗೆ ವ್ಯಸನಿಗಳಾಗುತ್ತಾರೆ. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ದಂತ ವೈದ್ಯೆ ಶೋಭಾ ಮಾತನಾಡಿ, ತಂಬಾಕು ಸೇವನೆಯಿಂದ ನಿಕೋಟಿನ್, ಕಾರ್ಬನ್ ಮೋನಾಕ್ಸೈಡ್, ಫಾರ್ಮಾಲಿನ್, ಕ್ಯಾಡಿಯಂ ವಿಷ ರಾಸಾಯನಿಕ ಅಂಶಗಳು ಮನುಷ್ಯನ ನರಮಂಡಲ, ಶ್ವಾಸಕೋಶ, ಯಕೃತ್ತು, ಮಿದುಳಿನ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಅನೇಕ ಗಂಭೀರ ಕಾಯಿಲೆಗಳಿಂದ ಬಳಲುವಂತಾಗಲಿದೆ. ಜನತೆ ತಂಬಾಕು ಉತ್ಪನ್ನಗಳಿಂದ ದೂರವಿರಬೇಕು ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್, ಸಾಂಕ್ರಾಮಿಕ ರೋಗ ತಜ್ಞ ಅಶೋಕ್, ಮಲೇರಿಯಾ ಮೇಲ್ವಿಚಾರಕ ಬಸವಲಿಂಗ, ಕ್ಷಯ ರೋಗ ಮೇಲ್ವಿಚಾರಕ ರವಿ ಕುಮಾರ, ಕಂಪ್ಯೂಟರ್ ಆಪರೇಟರ್ ವಸೀಂ ರೆಹಮಾನ್, ಎಲ್‌ಎಚ್‌ವಿ ನಾಗರತ್ನಾ, ಕುಷ್ಠರೋಗ ಮೇಲ್ವಿಚಾರಕಿ ರೇಷ್ಮಾ ಬೇಗಂ, ಎನ್‌ಸಿಡಿ ಸಮಾಲೋಚಕಿ ನೀಲಾಂಬಿಕಾ, ಶುಶ್ರೂಷಕಿ ಶಾಂತಾ, ಪ್ರಮುಖರಾದ ಚಂದ್ರಕಲಾ, ಸತ್ತರ್ ಪಾಷಾ, ಇಲಾಯುದ್ದೀನ್ ಇತರರಿದ್ದರು.