ಅಳವಂಡಿ ಸಮೀಪದ ಕಾತರಕಿ-ಗುಡ್ಲಾನೂರಿನಲ್ಲಿ ಆಯೋಜಿಸಿದ್ದ ಲೋಕಲ್ ಪ್ರೀಮಿಯರ್ ಲೀಗ್‌ಗೆ ಮುಖಂಡರು ಚಾಲನೆ ನೀಡಿದರು. ಪ್ರಮುಖರಾದ ಯರಿಯಪ್ಪಗೌಡ, ಈಶಪ್ಪ, ಅಂದಪ್ಪ, ಕೊಟ್ರಯ್ಯ, ಮುತ್ತಣ್ಣ, ಪ್ರವೀಣ, ಮಂಜುನಾಥ, ಗವಿ, ಮುತ್ತಣ್ಣ ಇತರರಿದ್ದರು. 
ಜಿಲ್ಲೆ

ಯುವಕರು ದುಶ್ಚಟಗಳಿಂದ ದೂರವಿರಲಿ

Kopala - Desk - Eraveni

ಅಳವಂಡಿ: ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜನೆ ಹೆಚ್ಚುತ್ತಿದ್ದು ಇದು ಯುವಕರಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲು ಸಹಕಾರಿಯಾಗಿದೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಯರಿಯಪ್ಪಗೌಡ ಹಿರೇಗೌಡ್ರ ತಿಳಿಸಿದರು.

ಸಮೀಪದ ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ಎಂಸಿಸಿ ಕ್ರಿಕೆಟ್ ಕ್ಲಬ್‌ನಿಂದ ನಡೆದ ಲೋಕಲ್ ಪ್ರೀಮಿಯರ್ ಲೀಗ್‌ಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಯುವಕರು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಮೋಬೈಲ್, ಟಿವಿ ಹಾಗೂ ದುಶ್ಚಟಗಳಿಗೆ ದಾಸರಾಗಿರುವುದು. ಯುವಕರು ಇವುಗಳಿಂದ ದೂರ ಇರಬೇಕು. ದೇಹ ಉಲ್ಲಾಸ, ಉತ್ಸಾಹ, ಸದೃಢವಾಗಿರಲು ಕ್ರೀಡೆ ಸಹಕಾರಿ ಎಂದರು.

ಪ್ರಮುಖರಾದ ಈಶಪ್ಪ ಭೈರಣ್ಣವರ, ಅಂದಪ್ಪ ಬೆಳವಿನಾಳ, ಕೊಟ್ರಯ್ಯ ಹಿರೇಮಠ, ಮುತ್ತಣ್ಣ ಗುದ್ನೇಪ್ಪನವರ, ಪ್ರವೀಣ ವಡ್ಡಿನ, ಮಂಜುನಾಥ ಸಿಂಗಪುರ, ಗವಿ ಮೇವುಂಡಿ, ಮುತ್ತಣ್ಣ ಬಳ್ಳಾರಿ, ರವಿ, ವಿರೂಪಾಕ್ಷಗೌಡ, ಮಂಜುನಾಥ, ಸುಧೀರ, ಅಶೋಕ, ಗಾಳೇಶ, ಗಾಳೆಪ್ಪಾ, ಬಸವರಾಜ, ಸಂತೋಷ, ಶ್ರೀಧರ್, ರಾಜು, ಮಲ್ಲಪ್ಪ, ನಾಗರಾಜ, ಸುರೇಶ, ದಯಾನಂದ ಇತರರಿದ್ದರು.