ಬಿಡದಿ: ಸಾಮಾಜಿಕ ಜಾಲತಾಣದಲ್ಲಿ ಬಂದ ಪಾರ್ಟ್ ಟೈಂ ಜಾಬ್ ಆಫರ್ ನಂಬಿ ವ್ಯಕ್ತಿಯೊಬ್ಬ 12 ಲಕ್ಷ ರೂ ಕಳೆದುಕೊಂಡಿರುವ ಘಟನೆ ಬೈರಮಂಗಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿತಿನ್ ಅವರ ಮೊಬೈಲ್ ನ ವ್ಯಾಟ್ಸಾಪ್ ಗೆ ಪಾರ್ಟ್ ಟೈಂ ಜಾಬ್ ಇದೆ ಎನ್ನುವ ಸಂದೇಶ ಬಂದಿತ್ತು. ಆ ಸಂದೇಶದ ಲಿಂಕ್ ಓಪನ್ ಮಾಡಿದಾಗ ಟೆಲಿಗ್ರಾಂ ಖಾತೆಯಲ್ಲಿ ಮತ್ತೊಂದು ಲಿಂಕ್ ಓಪನ್ ಆಗಿ ಅಲ್ಲಿ ಗೂಗಲ್ ನಲ್ಲಿ ರೆಸ್ಟೋರೆಂಟ್ ಗಳಿಗೆ ರೆಂಟಿಗ್ಸ್ ಕೊಟ್ಟು ಅದರ ಸ್ಕ್ರೀನ್ ಶಾಟ್ ಮಾಡಿ ಟೆಲಿಗ್ರಾಂ ನಲ್ಲಿ ವಾಪಸ್ಸು ಕಳಿಸಿದಾಗ ಹಣವನ್ನ ಕಳುಹಿಸುತ್ತೇವೆ. ಒಟ್ಟು 22 ಟಾಸ್ಕ್ ಮುಗಿಸಿದರೆ ಒಂದು ದಿನಕ್ಕೆ 7500 ರೂ ನಿಮಗೆ ಬರುತ್ತದೆ ಎಂದು ಹೇಳಿ ನಂಬಿಸಲಾಗಿತ್ತು.
ಇದನ್ನ ನಂಬಿದ ಆತ ಟಾಸ್ಕ್ ಗಳನ್ನ ಪೂರೈಸಲು ಆರಂಭಿಸಿದ್ದ . ಟಾಸ್ಕ್ ಪೂರೈಸಿ ಹಣ ಕೇಳಿ, ಬ್ಯಾಂಕ್ ಖಾತೆ ವಿವರ ಪಡೆದಿದ್ದಾರೆ. ಹಣ ಖಾತೆಗೆ ಹಾಕಲಾಗಿದೆ ಆದರೆ ರಾಂಗ್ ಆಡರ್ ಪಾಸ್ ಆಗಿದೆ ಇದನ್ನ ಸರಿಪಡಿಸಬೇಕಾದರೆ 5 ಲಕ್ಷ ಹಣ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನ ನಂಬಿ ಹಣವನ್ನ ಅವರು ನೀಡಿದ ಖಾತೆಗೆ ಹಾಕಿದ್ದಾನೆ. ಅದಾದನಂತರ ನಿಮ್ಮ ಖಾತೆಯಲ್ಲಿ ಯುಎಸ್ ಡಾಲರ್ ತೋರಿಸುತ್ತಿದೆ ಹಾಗಾಗಿ ಅಕೌಂಟ್ ಅಪ್ ಗ್ರೇಡ್ ಮಾಡಬೇಕಿದೆ ಅಂತ ಹೇಳಿ ಮತ್ತೆ ಹಣ ಹಾಕಿಸಿಕೊಳ್ಳಲಾಗಿದೆ. ನಂತರ ಟ್ಯಾಕ್ಸ್ ಕಟ್ಟಬೇಕೆಂದು ಸಹ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ.
ಈ ಸಂಬಂಧ ನಿತಿನ್ ಬುಧವಾರ ರಾಮನಗರ ಸಿ.ಇ.ಎನ್ ಅಪರಾದ ಪೊಲೀಸ್ ಠಾಣೆಯಲ್ಲಿ ವಂಚನೆ ಯಾಗಿರುವ ಬಗ್ಗೆ ದೂರು ನೀಡಿದ್ದಾರೆ.