ಜಿಲ್ಲೆ

ಸರಣಿ ಅಪಘಾತ ಯುವಕ ಸಾವು

ಚಿಂತಾಮಣಿ: ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ರಾಮನಗರ ಗೋವಾ ಸಂಪರ್ಕಿಸುವ ತೀನೈಘಾಟ್​ ಬಳಿ ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಚಿಂತಾಮಣಿಯ ಟಾಟಾ ಏಸ್​ ಚಾಲಕ ಮೃತಪಟ್ಟಿದ್ದಾನೆ.

ತಾಲೂಕಿನ ಬೋಡನಮರಿ ಗ್ರಾಮದ ನಿವಾಸಿ ರಾಜಶೇಖರ್​ (27) ಮೃತ. ಜೋಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಶೇಖರ್​ ಟಾಟಾ ಏಸ್​ನಲ್ಲಿ ಚಿಕ್ಕಬಳ್ಳಾಪುರದಿಂದ ಗೋವಾಗೆ ಹೂವು ತುಂಬಿಸಿಕೊಂಡು ಹೋಗಿದ್ದು, ಗೋವಾದಲ್ಲಿ ಹೂವನ್ನು ಅನ್​ ಲೋಡ್​ ಮಾಡಿ ವಾಪಸ್​ ಬರುತ್ತಿದ್ದಾಗ ಅಪಘಾತವಾಗಿದೆ. ಹೈದರಾಬಾದ್​ನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ ಮ್ಯಾಂಗನೀಸ್​ ತುಂಬಿಕೊಂಡು ಹೋಗುತಿದ್ದ ಟ್ರಕ್​ಅನ್ನು ಓವರ್​ ಟೇಕ್​ ಮಾಡುವ ಭರದಲ್ಲಿ ಮುಂಭಾಗದಲ್ಲಿ ಬರುತ್ತಿರುವ ಟಾಟಾ ಏಸ್​ಗೆ ಡಿಕ್ಕಿ ಹೊಡೆದಿದೆ. ರಾಜಶೇಖರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆೆ. ಟನೆಯಲ್ಲಿ ನಾಲ್ಕು ವಾಹನಗಳು ಜಖಂ ಆಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗುರುವಾರ ಬೆಳಗ್ಗೆ ರಾಜಶೇಖರ್​ ಮೃತ ದೇಹದ ಮರಣೋತ್ತರ ಪರೀೆ ನಡೆಸಿದ್ದು, ಗುರುವಾರ ಸಂಜೆ ಬೋಡನಮರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.