ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ಇಲ್ಲಿನ ಅಮಾನಿಬೈರಸಾಗರ ಕೆರೆ ಕಟ್ಟೆಯ ಮೇಲೆ ಗುರುವಾರ ರಾತ್ರಿ ಆಟೋ ಮತ್ತು ಓಮಿನಿ ಮಧ್ಯೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಆಟೋ ಚಾಲಕ ಗಂಭೀರ ಗಾಯಗೊಂಡಿದ್ದಾನೆ.
ಅಶೋಕ(28) ಮೃತ, ಗಾಯಗೊಂಡವರನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೆರೇಸಂದ್ರ ಕಡೆಯಿಂದ ಹೊಗುತ್ತಿದ್ದ ಆಟೋಗೆ ಗುಡಿಬಂಡೆಯಿಂದ ಹೊರಟಿದ್ದ ಓಮಿನಿ ಡಿಕ್ಕಿಹೊಡೆದಿದೆ ಎನ್ನಲಾಗಿದ್ದು, ಆಟೋದಲ್ಲಿದ್ದ ಯುವಕ ಗಂಭೀರ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾನೆ. ಕಾರಿನಲ್ಲಿದ್ದವರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿದ್ದು, ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದಲ್ಲಿ ಆಟೋ ಮತ್ತು ಕಾರು ನುಜ್ಜುನುಜ್ಜಾಗಿದೆ. ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.