ಹರೀಶ್ ಕುಮಾರ್ 
ಜಿಲ್ಲೆ

ಕೆರೆಗೆ ಕಾಲು ಜಾರಿ ಬಿದ್ದು ಯುವಕ ಮೃತ

ಅಭಿನಯ್ ಎಚ್.ಎಂ

ಎಚ್.ಡಿ.ಕೋಟೆ: ಜಾನುವಾರುಗಳಿಗೆ ನೀರು ಕುಡಿಸಲು ಹೋದ ವೇಳೆ ಕೆರೆಗೆ ಕಾಲು ಜಾರಿ ಬಿದ್ದು ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ತಾಲೂಕಿನ ಚಿಕ್ಕ ಕಾಳೇಗೌಡನ ಪುರ ಗ್ರಾಮದ ನಿವಾಸಿ ಚಂದ್ರು ಅವರ ಪುತ್ರ ಹರೀಶ್‌ಕುಮಾರ್ (18) ಮೃತಪಟ್ಟವ.

ಗ್ರಾಮದ ಪಕ್ಕ ಇರುವ ಕೆರೆಗೆ ಹರೀಶ್‌ಕುಮಾರ್ ಜಾನುವಾರುಗಳಿಗೆ ನೀರು ಕುಡಿಸಲೆಂದು ಹೋಗಿದ್ದಾನೆ. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುದ್ದು, ಯುವಕ ಮುಳುಗುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಜಮೀನಿನವರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ನಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸತತ ನಾಲ್ಕು ಗಂಟೆಗಳ ಕಾರ್ಯಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಮೇಲೆ ಎತ್ತಿದ್ದಾರೆ. ನಂತರ ಮೃತದೇಹವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.