ಜಿಲ್ಲೆ

ಕ್ವಾರಿಗೆ ಬಿದ್ದು ಯುವಕ ಸಾವು

ರೇಷ್ಮೆ ನಗರ ಡೆಸ್ಕ್

ಕನಕಪುರ: ತಾಲೂಕಿನ ಕೋಡಿಹಳ್ಳಿ ಹೋಬಳಿ, ಅರಕೆರೆ ಸಮೀಪದ ಕಲ್ಲು ಕ್ವಾರಿಗೆ ಬಿದ್ದು ಬುದ್ಧಿಮಾಂದ್ಯ ಯುವಕ ಮೃತಪಟ್ಟಿದ್ದಾನೆ. ಅರಕೆರೆ ಗ್ರಾಮದ ಶ್ರೀನಿವಾಸ(24) ಮೃತ.

ಶನಿವಾರ ಮಧ್ಯಾಹ್ನ ಮನೆಯವರೊಂದಿಗೆ ಜಗಳವಾಡಿಕೊಂಡು ಬೇಸರದಿಂದ ಕ್ವಾರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಮೃತನ ತಾಯಿ ಪುಟ್ಟಮ್ಮಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ,

ಗ್ರಾಮದ ಸುತ್ತಮುತ್ತ ಕಲ್ಲುಗಣಿಗಾರಿಕೆ ಕ್ವಾರಿಗಳನ್ನು ತೆಗೆದಿದ್ದು, ಅವುಗಳನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ್ದರಿಂದ ಅವಡ ಸಂಭವಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಸಬ್​ ಇನ್​ಸ್ಪೆಕ್ಟರ್​ ಪ್ರದಿಪ್​ ಸ್ಥಳ ಪರಿಶೀಲಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಭಾನುವಾರ ಬೆಳಗ್ಗೆ ಕ್ವಾರಿಯಿಂದ ಮೃತದೇಹ ಹೊರತೆಗೆದಿದ್ದಾರೆ. ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.