ಜಿಲ್ಲೆ

ಹಾವೇರಿ ಹೋರಿ ಹಬ್ಬದಲ್ಲಿ ಹಾರಿ ಹೋಯ್ತು ಪ್ರಾಣಪಕ್ಷಿ; ಯುವಕನ ಹೊಟ್ಟೆಗೇ ಹೊಕ್ಕಿತ್ತು ಕೊಂಬು..

ಹಾವೇರಿ: ಜಿಲ್ಲೆಯಲ್ಲಿ ನಡೆದ ಹೋರಿ ಹಬ್ಬದಲ್ಲಿ ಯುವಕನೊಬ್ಬ ತಿವಿತಕ್ಕೊಳಗಾಗಿ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆಯೊಂದು ವರದಿಯಾಗಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿ ಈ ಅವಘಡ ನಡೆದಿದೆ.

ಗುಡ್ಡದ ಹೊಸಳ್ಳಿ ಗ್ರಾಮದ ನಿವಾಸಿ ಷಣ್ಮುಖ (22) ಹೋರಿಯ ತಿವಿತಕ್ಕೊಳಗಾಗಿ ಮೃತಪಟ್ಟ ಯುವಕ. ಹಿರೇಕೆರೂರು ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಹೋರಿ ಹಬ್ಬ ನೋಡಲು ಬಂದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ರಾಜ್ಯಮಟ್ಟದ ಹೋರಿ ಬೆದರಿಸುವ ಈ ಸ್ಪರ್ಧೆಗೆ ರಾಜ್ಯದ ಮೂಲೆ ಮೂಲೆಗಳಿಂದ ಕೊಬ್ಬಿದ ಹೋರಿಗಳನ್ನು ತರಿಸಲಾಗಿತ್ತು. ಅಖಾಡದಲ್ಲಿ ಓಡುತ್ತಿದ್ದ ಹೋರಿಯನ್ನು ಷಣ್ಮುಖ ನೋಡುತ್ತಿದ್ದು, ಈ ಸಂದರ್ಭದಲ್ಲಿ ಹೋರಿಯೊಂದು ಈತನಿಗೆ ತಿವಿದಿದ್ದು, ಕೊಂಬು ಹೊಟ್ಟೆಗೇ ಹೊಕ್ಕಿದ್ದರಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಹಂಸಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.