ಜಿಲ್ಲೆ

ದೀಪಾವಳಿ ಭಾರತೀಯ ಸಂಸ್ಕೃತಿ ಸಾರುವ ಹಬ್ಬ - ಈಶ್ವರ ಶೆಟ್ಟಿ

Mangaluru - Hariprasad Rai




ಮಂಗಳೂರು : ಯಂಗ್ ಇಂಡಿಯನ್ಸ್ ಸಂಘಟನೆಯ ಮಂಗಳೂರು ಘಟಕದ ವತಿಯಿಂದ ದೀಪಾವಳಿ ಹಬ್ಬದ ಮಹತ್ವ
ಸಾರುವ ಕಾರ್ಯಕ್ರಮ ನಗರದ ರಥಬೀದಿಯ ಬಿಇಎಂ ಶಾಲೆಯಲ್ಲಿ ನಡೆಯಿತು.
ಅಶೋಕ ನಗರದ ಎಸ್‌ಡಿಎಂ ಶಾಲೆಯ ವಿದ್ಯಾರ್ಥಿಗಳು ತಾವು ತಯಾರಿಸಿದ ಅಲಂಕರಿಸಲ್ಫಟ್ಟ ಹಣತೆ ದೀಪಗಳೊಂದಿಗೆ ಬಿಎಎಂ ಶಾಲೆಗೆ ಆಗಮಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಹಂಚಿದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಯಂಗ್ ಇಂಡಿಯನ್ಸ್ ಸಂಘಟನೆಯ ಸಂಚಾಲಕ ಈಶ್ವರ ಶೆಟ್ಟಿ ಮಾತನಾಡಿ ಮೂರು ದಿನಗಳ ಕಾಲ ಆಚರಿಸುವ ದೀಪಾವಳಿ
ಭಾರತೀಯ ಸಂಸ್ಕೃತಿಯನ್ನು ಸಾರುವ ಬಹಳ ದೊಡ್ಡ ಹಬ್ಬ. ಕತ್ತಲೆಯನ್ನು ದೂರ ಮಾಡಲು ಹಣತೆ ಹಚ್ಚುವ ಆಚರಣೆ ಒಳ್ಳೆಯ ಸಂದೇಶ ಸಾರುತ್ತದೆ. ಎಂದರು.
ಸಂಚಾಲಕಿ ಸಮೀಕ್ಷಾ ಶೆಟ್ಟಿ, ಸಹ ಸಂಚಾಲಕಿ ಆತ್ಮಿಕಾ ಅಮೀನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೋಭನ್ ಶೆಟ್ಟಿ, ಮಧುಕರ್ ಕುಡ್ವ, ಅಜಿತ್ ಕುಮಾರ್ , ಬಿಇಎಂ ಶಾಲೆಯ ಪ್ರಾಂಶುಪಾಲ ಯಶವಂತ ಮಾಡ, ಎಸ್‌ಡಿಎಂ ಶಾಲೆಯ ದೀಪಾ ಮತ್ತು ನಾಗರತ್ನ ಉಪಸ್ಥಿತರಿದ್ದರು.