ಪ್ರತಿಭಟನೆ ನಡೆಸಿ ಸಂಘಟನೆಗಳ ಒತ್ತಾಯ | ನೀಲಹಳ್ಳಿ ಕೆರೆಯಲ್ಲಿ ಅಲೆಮಾರಿಗಳ ಶವಗಳ ಪತ್ತೆ
ವಿಜಯವಾಣಿ ಸುದ್ದಿಜಾಲ ಯಾದಗಿರಿ
ಅಲೆಮಾರಿ ಸಮುದಾಯದ ಇಬ್ಬರು ಮಹಿಳೆಯರ ನಿಗೂಢ ಸಾವಿನ ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಯವರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸುಭಾಷ ವೃತ್ತದಿಂದ ಎಸ್‌ಪಿ ಮತ್ತು ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಬೇಕೆಂದು ಪ್ರತಿಭಟನಾಕಾರರು ಒಕ್ಕೋರಲಿನಿಂದ ಆಗ್ರಹಿಸಿದರು.
ಪ್ರತಿಭಟನೆಯನ್ನುz್ದೆÃಶಿಸಿ ಮಾತನಾಡಿದ ಅಲೆಮಾರಿಗಳ ಸಂಘದ ರಾಜ್ಯಾಧ್ಯP್ಷÀ ಆಂಜನೇಯ, ಮಾದಿಗ ದಂಡೋರ ರಾಜ್ಯಾಧ್ಯP್ಷÀ ನರಸಪ್ಪ, ಜಿ¯್ಲÁಧ್ಯP್ಷÀ ಕಾಶಪ್ಪ ಹೆಗ್ಗಣಗೇರಾ, ದಸಂಸ ಜಿ¯್ಲÁಧ್ಯP್ಷÀ ಶರಣು ನಾಟೇಕರ್, ಗುರುಮಠಕಲï ಪಟ್ಟಣದ ಇಂದಿರಾ ನಗರದ ಅಲೆಮಾರಿ ವೇಷಗಾರ ಸಮುದಾಯದ ಶ್ಯಾಮಮ್ಮ ಹುಸೇನಪ್ಪ ಸಿರಿಗಿರಿ (೧೯) ಹಾಗೂ ಸಾಯಮ್ಮ ಭೀಮಪ್ಪ ಸಿರಿಗಿರಿ (೧೫) ಮನೆಯಿಂದ ಚಿಂದಿ ಆಯಲು ಹೋಗಿದ್ದಾಗ, ಫೆ.೧೨ರಂದು ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿz್ದÁರೆ. ಇಬ್ಬರ ಸಾವಿನ ಬಗ್ಗೆ ಅನುಮಾನಗಳಿವೆ, ಸಹಜ ಸಾವಲ್ಲ, ಕೊಲೆಯಾಗಿರುವ ಶಂಕೆ ಇದೆ ಎಂದು ಆರೋಪಿಸಿದರು.
ತಿಂಗಳ ಹಿಂದೆ ಗುರುಮಠಕಲï ಪಟ್ಟಣದಲ್ಲಿ ಚಿಂದಿ ಆಯುತ್ತಿz್ದÁಗ ಶೇಖ ಹುಸೇನ್ ಎಂಬಾತ ಕೈಹಿಡಿದು ಎಳೆದಾಡಿದ್ದು, ಆಗ ಶಾಮಮ್ಮ ಅವನಿಗೆ ಚಪ್ಪಲಿಯಿಂದ ಹೊಡೆದಿz್ದÁಳೆ. ಆಗ ಆತ ಅತ್ಯಾಚಾರ ನಡೆಸಿ ಕೊಲೆ ಮಾಡಿ ಕೆರೆಯಲ್ಲಿ ಎಸೆದಿರುವ ಅನುಮಾನವಿದೆ. ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಸಮಾಜದ ಮುಖಂಡರಾದ ಸಹದೇವ, ಮೋತಿ ಯಲ್ಲಪ್ಪ, ರಮೇಶ,ಯಮನಪ್ಪ, ಜೈರಾಮ ಯಣ್ಣಿ, ಬಸವರಾಜ ಕೊಂಡ್ರು, ಮಹೇಶ ಸೈದಾಪುರ, ನಾಗರಾಜ ಗುರುಮಠಕಲï, ಸೈದು ವಿಭೂತಿ, ರಂಗಮುನಿದಾಸ ರಾಯಚೂರು ಇದ್ದರು.
----