ಬಳ್ಳಾರಿ: ಯುವ ಪೀಳಿಗೆ ಹಾಗೂ ಸಂಶೋಧನಾರ್ಥಿಗಳಿಗೆ ಗಣಿತ ತಜ್ಞ ರಾಮಾನುಜನ್ ಸ್ಫೂರ್ತಿಯಾಗಿದ್ದಾರೆ ಎಂದು ವಿಎಸ್‌ಕೆ ವಿವಿ ಕುಲಸಚಿವೆ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.
ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಭಾಗದಿಂದ ಮಂಗಳವಾರ ಏರ್ಪಡಿಸಿದ್ದ ಭಾರತದ ಖ್ಯಾತ ಗಣಿತ ತಜ್ಞ ರಾಮಾನುಜನ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದ್ದು, ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದರು. ಕುಲಸಚಿವ (ಮೌಲ್ಯಮಾಪನ) ಪ್ರೊ.ಶಶಿಕಾಂತ ಉಡಿಕೇರಿ ಮಾತನಾಡಿ, ರಾಮಾನುಜನ್ ಅವರು ಬದುಕಿದ್ದ ಅಲ್ಪ ಸಮಯದಲ್ಲೇ ಗಣಿತಶಾಸ್ತ್ರದ ಸಂಶೋಧನೆಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.
ರಾಮಾನುಜನ್ ಪ್ರಶಸ್ತಿ ಪುರಸ್ಕೃತ, ಮಂಡ್ಯ ವಿವಿಯ ವಿಶ್ರಾಂತ ವಿಶೇಷಧಿಕಾರಿ ಪ್ರೊ.ಮಹದೇವ ನಾಯ್ಕ ಮಾತನಾಡಿದರು. ಗಣಕ ವಿಭಾಗದ ಅಧ್ಯಕ್ಷ ಕೆ.ವಿ.ಪ್ರಸಾದ, ಪ್ರಮುಖರಾದ ಲೋಕೇಶ್, ಹನುಮೇಶ ವೈದ್ಯ, ಸಂತೋಷ್ ಪಾಟೀಲ್ ಇತರರಿದ್ದರು.