ಕಕ್ಕೇರಿ: ಹಿಮೋಗ್ಲೋಬಿನ್ ಪ್ರಮಾಣ ಪರಿಶೀಲಿಸಲು ಖಾನಾಪುರ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳ್ಳಿ ರಕ್ತ ತಪಾಸಣೆ ಮಾಡುತ್ತಿದ್ದು, ವಿದ್ಯಾರ್ಥಿಗಳು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಆಸ್ಪತ್ರೆ ವೆದ್ಯಾಧಿಕಾರಿ ಡಾ. ಶಿವಾನಂದ ಕಿಣಗಿ ಹೇಳಿದರು.
ಸಮೀಪದ ಲಿಂಗನಮಠ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅನಿಮಿಯಾಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಪೌಷ್ಟಿಕ ಹಾಗೂ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇರುವ ವಿದ್ಯಾರ್ಥಿಗಳು ವೈದ್ಯರ ಸಲಹೆ ಪಡೆದು ಮುನ್ನಡೆಯಬೇಕು ಎಂದರು.
ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ ತಪಾಸಣೆ ಕಾರ್ಯ ನಡೆಯಿತು. ಉಪನ್ಯಾಸಕ ಸೋಮಶೇಖರ ಮೂಲಿಮನಿ ಮಾತನಾಡಿ, ರಾಷ್ಟ್ರೀಯ ಶ್ರವಣದೋಷ ನಿವಾರಣೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಜಿ.ಎನ್. ಕಂಬಳಿಮಠ, ಅಶ್ವಿನಿ ಬಡಿಗೇರ, ಶಿಕಿ ಪ್ರಭಾ, ಶಿಕ ಎಸ್.ಎಚ್. ಸಾವಂತ ಇತರರಿದ್ದರು.