filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಪ್ರತಿಮೆ ಸ್ಥಳಾಂತರಿಸಿ ಬಂಗಲೆ ಕಟ್ಟಿಕೊಳ್ಳಲ್ಲ

ರೇಷ್ಮೆ ನಗರ ಡೆಸ್ಕ್

ಮಾಗಡಿ ಶಾಸಕ ಬಾಲಕೃಷ್ಣ ತಿರುಗೇಟು | ಪ್ರತಿ ವಾರ ನಗರ ಪ್ರದಕ್ಷಿಣೆ ಇಂಗಿತ

ಮಾಗಡಿ: ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡಿ ನಾನು ಬಂಗಲೆ ಕಟ್ಟಿಕೊಳ್ಳುತ್ತಿಲ್ಲ ಎಂದು ಶಾಸಕ

ಎಚ್​. ಸಿ.ಬಾಲಕೃಷ್ಣ ಕಿಡಿಕಾರಿದರು.

ಪಟ್ಟಣದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ರಸ್ತೆ ವಿಸ್ತರಣೆ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಾಲೂಕಿನ ಬಡವರ ಆರೋಗ್ಯ, ಬದುಕಿಗಾಗಿ ಉತ್ತಮವಾಗಿ ಆಸ್ಪತ್ರೆ ನಿರ್ಮಿಸಲು ಕೆಂಪೇಗೌಡ ಪ್ರತಿಮೆ ಸ್ಥಳಾಂತರಿಸುತ್ತಿರುವುದು. ನಾನು ಮನೆ, ಅರಮನೆ ಕಟ್ಟಿಕೊಳ್ಳಲು ಅಲ್ಲ. ಉತ್ತಮ ಆಸ್ಪತ್ರೆ ನಿರ್ಮಿಸಿದರೆ ಬಡಜನರಿಗೆ ಅನುಕೂಲವಾಗುತ್ತದೆ, ಶ್ರೀಮಂತರು ಬೆಂಗಳೂರಿನ ಆಸ್ಪತ್ರೆಗೆ ತೆರಳುತ್ತಾರೆ, ಬಡವರು ಎಲ್ಲಿ ಹೋಗಲು ಸಾಧ್ಯ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿಗೆ ತಿರುಗೇಟು ನೀಡಿದರು. ಕೆಂಪೇಗೌಡ ಪ್ರತಿಮೆ ನಿರ್ಮಿಸಿರುವುದು ಪುರಸಭೆಯಲ್ಲಿ ರ್ನಿಣಯ ಆಗಿದ್ದರೂ ಜಿಲ್ಲಾಧಿಕಾರಿಗಳಿಂದ ಅಪೂವಲ್​ ಆಗಿಲ್ಲ. ಹಾಗಂತ ವಿರೋಧ ಮಾಡುತ್ತಿಲ್ಲ. ಗೌರವಯುತವಾಗಿ ಸ್ಥಳಾಂತರಮಾಡುತ್ತೇವೆ ಎಂದರು.

ಪ್ರತಿಮೆ ಸ್ಥಳಾಂತರ ಮಾಡಬಾರದು ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ಹೈಕೋರ್ಟ್​ಗೆ ಹೋಗಿತ್ತು. ಈ ವೇಳೆ ಸ್ಥಳಾಂತರ ಮಾಡುವ ಉದ್ದೇಶ ಆಸ್ಪತ್ರೆ ನಿರ್ಮಿಸಲು ಎಂದು ನಮ್ಮ ವಕೀಲರು ಕೋರ್ಟ್​ ಗಮನಕ್ಕೆ ತಂದರು. ಆಗ ಕೋರ್ಟ್​ ಆಸ್ಪತ್ರೆ ಪ್ರಮುಖ ವಿಷಯವಾಗಿದ್ದರಿಂದ ಉತ್ತಮ ರೀತಿಯಲ್ಲಿ ಆಸ್ಪತ್ರೆ ನಿರ್ಮಿಸಿ, ಕೆಂಪೇಗೌಡ ಪ್ರತಿಮೆಯನ್ನು ಒಳ್ಳೆಯ ಜಾಗಕ್ಕೆ ಸ್ಥಳಾಂತರ ಮಾಡಲು ಸೂಚಿಸಿದೆ ಎಂದರು.

ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್​ ತಾಲೂಕು ಸೇರುವುದರಿಂದ ಕುಣಿಗಲ್​ ದಕ್ಷಿಣ ಜಿಲ್ಲೆಗೆ ಬಂದರೆ ಒಳ್ಳೆಯದು, ಆ ತೀರ್ಮಾನ ದೊಡ್ಡ ಮಟ್ಟದಲ್ಲಿ ಆಗಬೇಕು. ಈ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದರು.ಪಟ್ಟಣದ ಕೆಂಪೇಗೌಡ ವೃತ್ತದಿಂದ ಎನ್​ಇಎಸ್​ ರಸ್ತೆ ಅಭಿವೃದ್ಧಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪು$್ಪಪಟ್ಟಿಗೆ ಸೇರಿಸಲಾಗುವುದು. 15 ಕೋಟಿ ರೂ. ವೆಚ್ಚದಲ್ಲಿ 9 ತಿಂಗಳ ಒಳಗೆ ಗೌರಮ್ಮನ ಕೆರೆ ಅಭಿವೃದ್ಧಿಗೊಳಿಸಲಾಗುವುದು.

ಪ್ರತಿ ತಿಂಗಳು ನಗರ ಪ್ರದಣೆ ನಡೆಸಲಾಗುವುದು. ಈ ವೇಳೆ ಕಾಮಗಾರಿ ಪೂರ್ಣಮಾಡದ ಗುತ್ತಿಗೆದಾರರನ್ನು ತೆಗೆದು ರೀ ಟೆಂಡರ್​ ನಡೆಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಈ ಸಂಬಂಧ ಗುರುವಾರ ಸಭೆ ನಡೆಸಲಾಗುವುದು ಎಂದರು.