ಜಿಲ್ಲೆ

ಯೋನೋ ಆ್ಯಪ್​ ಅಪಡೇಟ್​ ಹೆಸರಿನಲ್ಲಿ 4.99 ಲಕ್ಷ ರೂ. ವಂಚನೆ

ಬ್ಯಾಡಗಿ: ಯೋನೋ ಆಪ್​ ಅಪಡೇಟ್​ ಮಾಡಿಕೊಡುವ ನೆಪದಲ್ಲಿ ವೃದ್ಧರೊಬ್ಬರಿಗೆ 4.99 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತಾಲೂಕಿನ ಶಿಡೇನೂರ ಗ್ರಾಮದ ವೀರಪ್ಪ ಚನ್ನಬಸಪ್ಪ ಯೋಗಿಕೊಪ್ಪದ (75) ಎಂಬುವರಿಗೆ ಮೋಸ ಮಾಡಿರುವುದು.

ಅಪರಿಚಿತ ವ್ಯಕ್ತಿಯೊಬ್ಬ ಇವರ ಮೊಬೈಲ್​ನ ವಾಟ್ಸ್​ಅಪ್​ಗೆ ಲಿಂಕ್​ವೊಂದನ್ನು ಕಳುಹಿಸಿ ಯೋನೋ ಆಪ್​ ಅನ್ನು ಅಪಡೇಟ್​ ಮಾಡಿವುದಾಗಿ ನಂಬಿಸಿದ್ದಾನೆ. ಅದರಂತೆ ವೀರಪ್ಪ ಅವರನ್ನು ಲಿಂಕ್​ ಓಪನ್​ ಮಾಡುತ್ತಿದ್ದಂತೆ ಅವರ ಖಾತೆಯಲ್ಲಿದ್ದ 4.99 ಲಕ್ಷ ರೂ. ಬೇರೊಂದು ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.