ಜಿಲ್ಲೆ

ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಬೇಕಿದೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಮಂಗಳಮುಖಿಯರಿಗೂ ಎಲ್ಲರಂತೆ ಜೀವಿಸುವ ಸಮಾನ ಹಕ್ಕು ಇದ್ದು, ಅವರನ್ನು ಸಮಾಜದ ಪ್ರಮುಖ ವಾಹಿನಿಗೆ ತರುವ ಕೆಲಸ ಆಗಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯನಿರ್ವಾಹಕ ಸದಸ್ಯೆ ಯೋಗಿನಿ ದೇಶಪಾಂಡೆ ಹೇಳಿದರು.

ಇಲ್ಲಿನ ಶ್ರೀ ಸಿದ್ಧಾರೂಢರ ಮಠಕ್ಕೆ ಮಂಗಳವಾರ ಭೇಟಿ ನೀಡಿದ ಯೋಗಿನಿ ದೇಶಪಾಂಡೆ, ಉಭಯ ಆರೂಢರ ಗದ್ದುಗೆಯ ದರ್ಶನ ಪಡೆದರು. ನಂತರ ಇಲ್ಲಿನ ಸಂಸೃ್ಕ ಪಾಠ ಶಾಲೆಯಲ್ಲಿ ಮಂಗಳಮುಖಿಯರನ್ನು ಸನ್ಮಾನಿಸಿ, ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಮಾತನಾಡಿದರು.

ಮಂಗಳಮುಖಿಯರಿಗೂ ಎಲ್ಲರಂತೆ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಗಬೇಕೆಂಬ ಉದ್ದೇಶ ಪ್ರಧಾನಿ ಮೋದಿ ಅವರದ್ದು. ಇದಕ್ಕಾಗಿ ಅಗತ್ಯ ಸೌಲಭ್ಯ ಒದಗಿಸಲು, ಯೋಜನೆ ರೂಪಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಯೋಜನೆಗಳ ಪ್ರಚಾರಾರ್ಥ ದೇಶದ ಎಲ್ಲ ರಾಜ್ಯಗಳಲ್ಲಿನ ಪ್ರತಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಒಬ್ಬ ಕಾರ್ಯನಿರ್ವಾಹಕ ಸದಸ್ಯೆ ನಿಯೋಜಿಸಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯೋಗಿನಿ ದೇಶಪಾಂಡ ಅವರು ಮಂಗಳಮುಖಿಯರ ಸಮಸ್ಯೆ ಆಲಿಸಿದರು.

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಂಗಳಮುಖಿಯರಿದ್ದಾರೆ. ವಸತಿ ಸೌಲಭ್ಯ, ಗೌರವಯುತವಾಗಿ ಜೀವನ ನಡೆಸಲು ಬೇಕಾದ ವ್ಯವಸ್ಥೆ ಇಲ್ಲ. ನಮ್ಮನ್ನು ಕೀಳಾಗಿ ಕಾಣುವ ಪ್ರವೃತ್ತಿ ಮುಂದುವರಿದಿದೆ ಎಂದು ಮಂಗಳಮುಖಿ ಪೂಜಾ ತಮ್ಮ ಅಳಲು ವ್ಯಕ್ತಪಡಿಸಿದರು.

ಮಂಗಳಮುಖಿಯರಿಗೆ ವಯಸ್ಸಿನ ಮಿತಿ ಪರಿಗಣಿಸದೇ ಸರ್ಕಾರಿ ಉದೊ್ಯೕಗ ನೀಡಬೇಕು. ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿದರು. ಮಾಜಿ ಉಪಮೇಯರ್ ಉಮಾ ಮುಕುಂದ, ಸೀಮಾ ಲದ್ವಾ, ಪೂರ್ಣಿಮಾ ಸಿಂಧೆ, ಅನುರಾಧ ಚಿಲ್ಲಾಳ, ಜೊ್ಯೕತಿ ಪಾಟೀಲ, ಚಂದ್ರಶೇಖರ ಗೋಕಾಕ, ರಂಗಾ ಬದ್ದಿ, ವಿನಾಯಕ ಘೋರ್ಪಡೆ ಹಾಗೂ ಇತರರು ಇದ್ದರು.