* ಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದ ಎಚ್ಡಿಕೆ
* ಜೆಡಿಎಸ್ - ಬಿಜೆಪಿಯಲ್ಲಿ ತೀವ್ರ ಪೈಪೋಟಿ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ರೂಷಿಸಿರುವ ಬೆನ್ನಲ್ಲೆ ಮೈತ್ರಿ ಪದ ಪ್ರಬಲ ಟಿಕೆಟ್ ಆಕಾಂ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಮುಂದಿನ ನಡೆಯೇನು ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದ ಶಾಸಕ ಸ್ಥಾನದ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಯಾವ ಣದಲ್ಲಾರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಮೈತ್ರಿ ಪಗಳಾದ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಇದರ ನಡುವೆ ಈ ಕ್ಷೇತ್ರವನ್ನು ತಾವೇ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಮುಂದಾಗಿರುವುದು ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.
ತಾಲೂಕಿನಲ್ಲಿ ಬಿಡದಿ ಸಭೆಯ ಸಂಚಲನ!
ವಿಜಯದಶಮಿಯಂದು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಬಿಡದಿಯ ತೋಟದ ನಿವಾಸದಲ್ಲಿ ಚನ್ನಪಟ್ಟಣ ಕ್ಷೇತ್ರದ ಮುಖಂಡರ ಸಭೆ ನಡೆಸುವ ಜತೆಗೆ, ಔತಣಕೂಟ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಕುಮಾರಸ್ವಾಮಿ, ಕ್ಷೇತ್ರವನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೇಯೇ ಇಲ್ಲ. ನಾನೇ ಖುದ್ದು ಚುನಾವಣೆ ನಡೆಸುತ್ತೇನೆ. ಕ್ಷೇತ್ರದ ಟಿಕೆಟ್ ಬಗ್ಗೆ ಈ ಹಿಂದೆ ಯಾವುದೇ ಒಪ್ಪಂದವಾಗಿಲ್ಲ. ನಮ್ಮ ಕ್ಷೇತ್ರ ನಾವು ಉಳಿಸಿಕೊಳ್ಳೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇದರೊಂದಿಗೆ, ಅಲ್ಲಿ ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿ ಇದ್ದಂತೆ. ನಿಮಗೆ ಖುಷಿಯಾಗುವ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇನೆ ಎಂದು ಘೋಷಿಸಿದರು. ಬಿಡದಿಯ ಸಭೆಯಲ್ಲಿ ಈ ಕ್ಷೇತ್ರದ ಟಿಕೆಟ್ ಜೆಡಿಎಸ್ಗೆ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಬಿಜೆಪಿ ವಲಯದಲ್ಲಿ ತೀವ್ರ ಸಂಚಲನ ಆರಂಭವಾಗಿದೆ. ಉಪಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿ ಯೋಗೇಶ್ವರ್ ಮುಂದಿನ ನಡೆಯೇನು? ಎಂಬುದರ ಬಗ್ಗೆ ರಾಜಕೀಯ ಚರ್ಚೆ ಆರಂಭಗೊಂಡಿದೆ.
ಅಂತಿಮ ಕಸರತ್ತು
ಉಪಚುನಾವಣೆಯಲ್ಲಿ ಮೈತ್ರಿ ಪದಿಂದ ಸ್ಪರ್ಧಿಸಲು ತೀವ್ರ ಆಸಕ್ತಿ ಹೊಂದಿರುವ ಸಿಪಿವೈ ಹಲವು ದಿನಗಳಿಂದಲೇ ಅದಕ್ಕೆ ಬೇಕಾದ ರಾಜಕೀಯ ತಂತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಾರಂಭದ ದಿನದಿಂದಲೂ ಅವರಿಗೆ ಟಿಕೆಟ್ ಕೈ ತಪ್ಪುವ ಬಗ್ಗೆ ಕೊಂಚ ಆತಂಕವಿತ್ತು. ಇದರ ಮಧ್ಯೆ ಬಿಡದಿ ಸಭೆಯಲ್ಲಿ ನಡೆದಿರುವ ಚರ್ಚೆ ಹಾಗೂ ತೀರ್ಮಾನಗಳು ಸಿಪಿವೈ ಆತಂಕವನ್ನು ದ್ವಿಗುಣಗೊಳಿಸಿವೆ. ಈ ಸಭೆಯ ನಂತರ ಮತ್ತಷ್ಟು ಅರ್ಲಟ್ ಆಗಿರುವ ಯೋಗೇಶ್ವರ್ ಅಂತಿಮ ಕಸರತ್ತು ನಡೆಸಲು ಸಿದ್ಧವಾಗಿದ್ದಾರೆ.
ತೀವ್ರ ಚರ್ಚೆ
ಚನ್ನಪಟ್ಟಣದ ತಮ್ಮ ನಿವಾಸದಲ್ಲಿ ಆಪ್ತ ಮುಖಂಡರು ಮತ್ತು ಹಿತೈಷಿಗಳ ಸಭೆಯನ್ನು ನಿರಂತರವಾಗಿ ನಡೆಸುತ್ತಿರುವ ಯೋಗೇಶ್ವರ್ ಮುಂದಿನ ನಡೆಯ ಬಗ್ಗೆ ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಂಬಂಧ ಕೊನೆ ಣದವರೆಗೆ ಪ್ರಯತ್ನ ನಡೆಸುತ್ತೇನೆ. ಬಿಜೆಪಿ ರಾಷ್ಟ್ರ ನಾಯಕರಿಗೆ ವಸ್ತು ಸ್ಥಿತಿ ಮನವರಿಕೆ ಮಾಡಿಕೊಟ್ಟು, ಕುಮಾರಸ್ವಾಮಿ ಮನವೊಲಿಸಿ ಟಿಕೆಟ್ ಕೊಡಿಸುವಂತೆ ಕೇಳುತ್ತೇನೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ ಎಂದು ಸಭೆಯಲ್ಲಿ ಹೇಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.