ರಾಮನಗರ: ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆಗೆ ಒಪ್ಪಿದ್ದ ಸಿ.ಪಿ.ಯೋಗೇಶ್ವರ್ ಅವರು ಈಗ ಬೇಡ ಎನ್ನುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಒತ್ತಡ ಹೇರುತ್ತಿದ್ದೇವೆ ಎಂದು ಜೆಡಿಎಸ್ ಜಿಲ್ಲಾ ಟಕದ ಅಧ್ಕಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಅವಧಿಯಿಂದಲೂ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಇದರಿಂತೆ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಯುವ ಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಕೋರ್ ಕಮಿಟಿ ಸದಸ್ಯರು ಸಭೆಗಳನ್ನು ನಡೆಸುವ ಮೂಲಕ ಯೋಗೇಶ್ವರ್ ಅವರ ಸ್ಪರ್ಧೆಯನ್ನು ಅಖೈರುಗೊಳಿಸಲಾಗಿತ್ತು.
ಮೊದಲು ಚಿಹ್ನೆ ಮುಖ್ಯವಲ್ಲ, ಎನ್ ಡಿಎ ಗೆಲುವು ಮುಖ್ಯ ಎಂದು ಸ್ಪರ್ಧೆಗೆ ಒಪ್ಪಿದ್ದ ಯೋಗೇಶ್ವರ್ ಅವರನ್ನು ಈಗ ಕಾರ್ಯಕರ್ತರು ಒಪು$್ಪತ್ತಿಲ್ಲ ಎನ್ನುವ ಕಾರಣ ನೀಡಿ, ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಈ ಮೂಲಕ ನಮ್ಮ ಪಕ್ಷದಿಂದ ನೀಡಿದ್ದ ಆಹ್ವಾನವನ್ನು ಅವರು ತಿರಸ್ಕಾರ ಮಾಡಿದ್ದಾರೆ ಎಂದು ಮಂಜುನಾಥ್ ಹೇಳಿದರು.
ಯೋಗೇಶ್ವರ್ ಅವರ ಸ್ಪರ್ಧೆ ನಿರಾಕರಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಯಾರಗಬೇಕು ಎನ್ನುವ ತೀರ್ಮಾನ ಆಗಬೇಕಿದೆ. ಪ್ರಭಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎನ್ನುವ ನಿರ್ಧಾರ ನಮ್ಮೆಲ್ಲರದ್ದಾಗಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸುವಂತೆ ಸ್ಥಳಿಯ ಕಾರ್ಯಕರ್ತರು ಹಾಗೂ ಮುಖಂಡರು ಒತ್ತಡ ಹಾಕುತ್ತಿದ್ದಾರೆ. . ಒಂದೆರಡು ದಿನಗಳಲ್ಲಿ ಅಭ್ಯರ್ಥಿ ಅಂತಿಮ ಆಗಲಿದೆ ಎಂದರು.
ಒಂದು ವೇಳೆ ನಿಖಿಲ್ ಒಪ್ಪದಿದ್ದರೆ ಸ್ಥಳಿಯ ಪ್ರಭಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಆಸೆ ನಮಗೂ ಇದೆ. ನಿಖಿಲ್ ಪಕ್ಷ ಸಂಟನೆ ಮಾಡಬೇಕು, ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ. ಇದರ ಹೊರತಾಗಿಯೂ ಅವರು ಸ್ಪರ್ಧೆ ಮಾಡುವಂತೆ ಒತ್ತಡ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ನಿಖಿಲ್ ಒಂದು ವೇಳೆ ಸೋತರೆ ಎನ್ನುವ ಪ್ರಶ್ನೆಯೇ ಇಲ್ಲ, ಹಿಂದಿನ ಎರಡು ಚುನಾವಣೆಗಳಲ್ಲಿ ಅವರು ರಾಜಕೀಯ ಷಡ್ಯಂತ್ರಕ್ಕೆ ಹಾಗೂ ಇತಶತ್ರುಗಳ ಒಳಸಂಚಿಗೆ ಬಲಿಯದರು. ಹಿಂದಿನ ಸೋಲಿಂಗಳಿಂದ ಅವರೂ ಸಾಕಷ್ಟು ಕಲಿತಿದ್ದು, ಈ ಬಾರಿ ಹಿಂದಿನಂತೆ ಆಗಲು ಸಾಧ್ಯವಿಲ್ಲ ಎಂದು ಮಂಜುನಾಥ್, ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಂತೆ ಚನ್ನಪಟ್ಟಣವನ್ನು ಬಿಜೆಪಿಗೆ ಬಿಟ್ಟುಕೊಡಿ ಎನ್ನುವ ಕಮಲ ಪಾಳಯದ ನಾಯಕರ ವಾದವನ್ನು ತಳ್ಳಿಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ಮತಗಳ ಆಧಾರದ ಮೇಲೆಯೇ ಕೋಲಾರ ಮತ್ತು ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಆದರೆ ವಿಧಾನಸಭೆ. ಲೋಕಸಭೆ ಚುನಾವಣೆ ಬೇರೆ, ಉಪ ಚುನಾವಣೆಯೇ ಬೇರೆ ಎಂದು ವಿಶ್ಲೇಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜು, ಸಬ್ಬಕೆರೆ ಶಿವಲಿಂಗಪ್ಪ, ಮಂಜುನಾಥ್, ರವಿ, ರಮೇಶ್, ಹೋಟೆಲ್ ಉಮೇಶ್, ರಾಮಕೃಷ್ಣಯ್ಯ ಮುಂತಾದವರು ಇದ್ದರು.