ಜಿಲ್ಲೆ

ಬದಿಯಡ್ಕದಲ್ಲಿ ಯೋಗಾಭಿನಮನಂ ಸಮಾರೋಪ

ಸೌಮ್ಯ ಆರ್

ಬದಿಯಡ್ಕ: ಕಾಸರಗೋಡಿನ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ, ಆರೋಗ್ಯ ಜಾಗೃತಿ ಶಿಬಿರ, ಪರಿಸರ ಸಂರಕ್ಷಣಾ ಮಾಹಿತಿ ಶಿಬಿರ, ಗೋಚಿಕಿತ್ಸಾ ಶಿಬಿರ, ಯೋಗ ತೆರಾಫಿ ಕಾರ್ಯಾಗಾರ, ಆಹಾರ ಮಾಹಿತಿ ಶಿಬಿರ, ಮಕ್ಕಳಿಗೆ ಸೂರ್ಯನಮಸ್ಕಾರದ ತರಬೇತಿ ಹಾಗೂ ಡ್ರಗ್ಸ್ ಮತ್ತು ಇನ್ನಿತರ ಮಾದಕ ವಸ್ತುಗಳ ಸೇವನೆ ಬಗ್ಗೆ ಜಾಗೃತಿ ಸಮಾವೇಶ ‘ಯೋಗಾಭಿನಮನಂ’ ಸಮಾರೋಪ ಸಮಾರಂಭ ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರುಗಿತು.

ಕಾಸರಗೋಡು ಚಿನ್ಮಯ ಮಿಶನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ಉದ್ಘಾಟಿಸಿದರು. ಶಿಕ್ಷಕ ಪ್ರಭಾಕರನ್ ನಾಯರ್ ಶುಭಹಾರೈಸಿದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕಿ ದಿವ್ಯಾ ಶರ್ಮ ಪಳ್ಳತ್ತಡ್ಕ ಸ್ವಾಗತಿಸಿದರು. ಎಂ.ಬಿ.ಲೋಕೇಶ್ ಆಚಾರ್ ಕಂಬಾರು ವಂದಿಸಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಾಂದೀಪನಿ ಯೋಗ ಸೇವಾಲಯ, ಶಾರದಾ ಆಯುರ್ವೇದ ಆಸ್ಪತ್ರೆ, ಭಾರತೀಯ ಮಜ್ದೂರ್ ಸಂಘ, ಬಾಲಗೋಕುಲ, ವಿವಿಧ ಭಜನಾ ತಂಡ ಯೋಗಕೇಂದ್ರ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.