ಜಿಲ್ಲೆ

ಆತ್ಮವಿಶ್ವಾಸ ವೃದ್ಧಿಸುವ ಯೋಗ

ಸೋಮಲಿಂಗ ತಳವಾರ

ಬೆಳಗಾವಿ: ಯೋಗ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಾಗುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಅಂತಾರಾಷ್ಟ್ರೀಯ ಯೋಗಪಟು ವಿನಾಯಕ ಕೊಣಗಿ ಹೇಳಿದರು.

ನಗರದ ಕೆಎಲ್​ಎಸ್​ ಸಂಸ್ಥೆಯ ಐಎಂಇಆರ್​ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ ಬುಧವಾರ ಆಯೋಜಿಸಿದ್ದ ಯೋಗಾಸನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಗಗುರು ಮುರಳೀಧರ ಪ್ರಭು ಮಾತನಾಡಿದರು. ಅತಿಥಿಯಾಗಿ ಕೆಎಸ್​ಆರ್​ಪಿ ಸಬ್​ ಇನ್ಸ್​ಪೆಕ್ಟರ್​ ಹರೀಶ್​ ಕೆ.ಎಲ್​. ಯೋಗದ ಮಹತ್ವ ವಿವರಿಸಿದರು. ಯೋಗ ಸ್ಪರ್ಧೆಯು ಅಂತರ&ಶಾಲಾ (ಬಾಲಕರು ಮತ್ತು ಬಾಲಕಿಯರು), ಮುಕ್ತ ವಯಸ್ಸಿನ ವಿಭಾಗ (ಪುರುಷರು ಮತ್ತು ಮಹಿಳೆಯರು) ಮತ್ತು ಪೊಲೀಸ್​ ಇಲಾಖೆ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಯಿತು. ಆಡಳಿತ ಮಂಡಳಿ ಅಧ್ಯ ಆರ್​.ಎಸ್​. ಮುತಾಲಿಕ್​ ಅಧ್ಯಕ್ಷತೆ ವಹಿಸಿದ್ದರು. ಕೆಎಲ್​ಎಸ್​ ಐಎಂಇಆರ್​ ನಿರ್ದೇಶಕ ಡಾ. ಆರೀಫ್​ ಶೇಖ್​, ದೈಹಿಕ ಶಿಣ ನಿರ್ದೇಶಕ ಡಾ. ಜಾರ್ಜ್​ ರೊಡ್ರಿಗಸ್​, ಸುನೀಲ ಕುಲಕರ್ಣಿ ಇತರರಿದ್ದರು.