ಜಿಲ್ಲೆ

ವಿಶ್ವ ಧ್ಯಾನ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ

Dharwada - Basavaraj Idli

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ವತಿಯಿಂದ ನಗರದ ಕೇಶ್ವಾಪುರ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಪ್ರಥಮ ವಿಶ್ವ ಧ್ಯಾನ ದಿನ ಆಚರಿಸಲಾಯಿತು.

ಯೋಗ ಪೀಠದ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗ, ಧ್ಯಾನ ಮಾಡಲಾಯಿತು.

ಬೆಳಗಾವಿಯ ಯೋಗ ಶಿಕ್ಷಕಿ, ವಿದ್ಯಾ ಉಪೇಂದ್ರ ಜೋಶಿ ಇವರಿಗೆ "ಯೋಗ ವಾರಿಯರ್ಸ್' ಪ್ರಶಸ್ತಿ ನೀಡೀ ಗೌರವಿಸಲಾಯಿತು.

ಲೇಖಕಿ, ಹವ್ಯಾಸಿ, ಸಾಹಿತಿ, ಸಂಗೀತಗಾರ್ತಿ, ಭಾಷಣಕಾರರೂ ಆಗಿರುವ ವಿದ್ಯಾ ಇವರು ಸುಮಾರು 8 ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದು, ಕನ್ನಡ ಸರ್ಕಾರಿ ಶಾಲೆಯ ಮಕ್ಕಳು, ಸಿಬ್ಬಂದಿಗೆ ಉಚಿತ ಯೋಗಾಭ್ಯಾಸ ಮಾಡಿಸಿದ್ದಾರೆ. ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿ ಸುಮಾರು 20 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದಾರೆ. ರೇಡಿಯೋ ಮಾಧ್ಯಮದಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಪತಂಜಲಿ ಹುಬ್ಬಳ್ಳಿಯ ವಾಮನ ಶಾನುಭಾಗ, ಮಹೇಶ ಕೊಟ್ಟಿಗೆರೆ, ಡಾ. ನಳಿನಿ ಮಗದುಮ್, ರಾಜಶೇಖರ ಕುದರಿ, ಮುತ್ತಪ್ಪ ನಲವಾಡಿ, ಭರಮಪ್ಪನವರ, ಮಾಳಪ್ಪನವರ, ಪುಠಾಣಿ ಶ್ರೀದೇವಿ, ಉಪೇಂದ್ರ ಜೋಶಿ, ಧಾರವಾಡದ ಬಸವರಾಜ, ಶ್ರೀದೇವಿ, ವೀರೇಶ, ಅಕ್ಷಯ, ವಿಜಯ, ರೂಪಾ, ದೇವೇಂದ್ರ, ರಾಧಾಬಾಯಿ ಕುಲಕಣಿರ್ ಮುಂತಾದವರು ಉಪಸ್ಥಿತರಿದ್ದರು.