ಮೈಸೂರು: ಯೋಗ ಕಲಿಯುವ ನೆಪದಲ್ಲಿ ಯೋಗ ಶಿಕ್ಷಕಿಗೆ ಶಿಷ್ಯನೊಬ್ಬ 10.9 ಲಕ್ಷ ರೂ. ವಂಚಿಸಿದ್ದಾನೆ. ವಿವೇಕಾನಂದ ನಗರದ ಯೋಗ ಶಿಕ್ಷಕಿ ಸವಿತಾ ಕುಮಾರಿ ಹಣ ಕಳೆದುಕೊಂಡು ಈಗ ಪೊಲೀಸರಿಗೆ ದೂರು ನೀಡಿದ್ದಾರೆ.
ಯೋಗ ತರಗತಿ ನಡೆಸುತ್ತಿದ್ದ ಸವಿತಾಕುಮಾರಿ ಅವರು ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಆನ್‌ಲೈನ್‌ನಲ್ಲಿ ಯೋಗ ಕಲಿಸುವ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನು ಗಮನಿಸಿ ಇಂಗ್ಲೇಡ್‌ನ ಟಾಮಿ ಅಲಿಸನ್ ಹೆಸರಿನ ಯುವಕ ನಾನು ಯೋಗ ಕಲಿಯುವುದಾಗಿ ಆನ್‌ಲೈನ್ ತರಗತಿಗೆ ಸೇರಿಕೊಂಡಿದ್ದಾನೆ.
ಎರಡು ತಿಂಗಳ ಬಳಿಕ ಸವಿತಾ ಅವರು ಶುಲ್ಕ ಕೇಳಿದಾಗ ನಾನು ಬೇರೆ ದೇಶದ ಪ್ರಜೆ ಅಗಿರುವುದರಿಂದ ಹಣ ವರ್ಗಾವಣೆ ಮಾಡಲು ಯೊಂದರೆ ಅಗುತ್ತದೆ. ಹಾಗಾಗಿ ಗಿಫ್ಟ್ ಮತ್ತು 50 ಸಾವಿರ ಪೌಂಡ್ ಹಣವನ್ನು ಕಳುಹಿಸುತ್ತೇನೆ. ಅದನ್ನು ಕಸ್ಟಂ ಶುಲ್ಕ ಪಾವತಿ ಪಡೆದುಕೊಳ್ಳಿ ನಂತರ ಬಾಕಿ ಹಣವನ್ನು ನಾನು ಭಾರತಕ್ಕೆ ಬಂದಾಗ ಕೊಡುತ್ತೇನೆ ಎಂದು ನಂಬಿಸಿದ್ದಾನೆ.
ಅದರಂತೆ 30 ಸಾವಿರ ರೂ. ಅನ್ನು ಆತ ಹೇಳಿದ ಬ್ಯಾಂಕ್ ಖಾತೆಗೆ ಸವಿತಾ ಅವರು ಜಮಾ ಮಾಡಿದ್ದಾರೆ. ಆದರೆ ಮತ್ತೆ ಮತ್ತೆ ಏನೇನೋ ಸಬೂಬು ಹೇಳಿ ಹಂತ ಹಂತವಾಗಿ 10 ಲಕ್ಷ ರೂ.ವರೆಗೆ ಹಣ ಪಡೆದುಕೊಂಡಿದ್ದಾನೆ. ಆದರೆ ಗಿಫ್ಟ್ ಹಾಗೂ ವಿದೇಶಿ ಹಣ ಬಾರದೆ ಇದ್ದಾಗ ಅನುಮಾನ ಗೊಂಡ ತಾನು ಕಳುಹಿಸಿದದ ಹಣ ವಾಸ್ ಕೇಳಿದ್ದಾರೆ. ಆದರೆ ಆತ ಆನ್‌ಲೈನ್ ಸಂಪರ್ಕಕ್ಕೆ ಸಿಗದೆ ವಂಚನೆ ಮಾಡಿದ್ದಾನೆ. ಇದರಿಂದ ವಂಚನೆಯಾಗಿರುವುದು ಗೊತ್ತಾಗಿದೆ. ಸೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.