ಮುದ್ದೇಬಿಹಾಳದಲ್ಲಿ ಯೋಗ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಊರಿನ ಪ್ರಮುಖರು ಚರ್ಚಿಸಿದರು. ಪ್ರಭುರಾಜ ಕಲಬುರ್ಗಿ, ಬಸಯ್ಯ ನಂದಿಕೇಶ್ವರಮಠ, ರುದ್ರೇಶ ಕಿತ್ತೂರ, ಪಾರಸ ಪೋರವಾಲ, ನಾಗಭೂಷಣ ನಾವದಗಿ, ಎಂ.ಎಸ್.ಗಡೇದ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಗೌರಮ್ಮ ಹುನಗುಂದ ಇತರರಿದ್ದರು.  
ಜಿಲ್ಲೆ

ಡಿ.1 ರಿಂದ ಯೋಗ, ಆಧ್ಯಾತ್ಮಿಕ ಶಿಬಿರ

ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ಧೇಶ್ವರ ವೇದಿಕೆ ಆವರಣದಲ್ಲಿ ಡಿ.1 ರಿಂದ 11 ದಿನ ನಡೆಯಲಿರುವ ಯೋಗಪಟು ನಿರಂಜನ ಶ್ರೀಗಳ ನೇತೃತ್ವದ ಯೋಗ, ಆಧ್ಯಾತ್ಮಿಕ ಶಿಬಿರ ಯಶಸ್ಸಿಗೆ ಪಟ್ಟಣದ ಸರ್ವ ಸಮಾಜದವರು ಶ್ರಮಿಸಲು ತೀರ್ಮಾನಿಸಿದರು.

ಇಲ್ಲಿನ ಜೆಸಿ ಶಾಲೆಯ ಆವರಣದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣದ ಸರ್ವ ಸಮಾಜದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮುಖ್ಯಾಧ್ಯಾಪಕ ರುದ್ರೇಶ ಕಿತ್ತೂರ, ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ ಮಾತನಾಡಿ, ನಿತ್ಯ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ಯೋಗ, ಸಂಜೆ 6-30 ರಿಂದ 7-30 ರವರೆಗೆ ಆಧ್ಯಾತ್ಮಿಕ ಪ್ರವಚನ ನಡೆಯುತ್ತದೆ. ಬಿಡುವಿನ ಅವಧಿಯಲ್ಲಿ ಶ್ರೀಗಳು ಹಲವು ಶಾಲೆಗಳಿಗೆ ಭೇಟಿ ನೀಡಿ ಅಧ್ಯಾತ್ಮದ ಮಹತ್ವವನ್ನು ಶಿಕ್ಷಕರು, ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಿದ್ದಾರೆ. ನಿತ್ಯವೂ ಒಬ್ಬ ಭಕ್ತರ ಮನೆಯಲ್ಲಿ ಲಿಂಗ ಪೂಜೆ ನಡೆಸುತ್ತಾರೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಅಶೋಕ ನಾಡಗೌಡ, ಬಾಪೂಗೌಡ ಪಾಟೀಲ ಆಲೂರ, ಚಂಚ್ರಶೇಖರ ಇಟಗಿ, ಎಸ್.ಎ.ಬೇವಿನಗಿಡದ, ಬಿ.ವಿ.ಕೋರಿ, ಪುರಸಭೆ ಸದಸ್ಯರಾದ ಅಶೋಕ ವನಹಳ್ಳಿ, ಸಂಗಮ್ಮ ದೇವರಳ್ಳಿ, ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಭಾರತಿ ಪಾಟೀಲ, ಪ್ರಮುಖರಾದ ಶರಣು ಸಜ್ಜನ, ರವಿ ತಡಸದ, ರವಿ ಗೂಳಿ, ಪಾರಸ ಪೋರವಾಲ, ಮಹಾಬಳೇಶ ಗಡೇದ, ನಾಗಭೂಷಣ ನಾವದಗಿ, ಡಾ.ವೀರೇಶ ಪಾಟೀಲ, ವೆಂಕನಗೌಡ ಪಾಟೀಲ, ಎಂ.ಎಸ್.ಬಿದರಕುಂದಿ, ಮುರಳಿ ಬುಡ್ಡೊಡಿ, ವಿಕ್ರಮ ಓಸ್ವಾಲ, ಎಂ.ಬಿ.ಪಾಟೀಲ, ಸಂತು ನಡಗೇರಿ, ಬಸವರಾಜ ಅಂಗಡಗೇರಿ, ಡಾ.ರಾಜೇಶ್ವರಿ ಗೂಳಿ, ಗೌರಮ್ಮ ಹುನಗುಂದ ಬಲದಿನ್ನಿ, ಸರೋಜಾ ಕೋರಿ, ಶರಣು ಪಡದಾಳಿ ಇತರರು ಸಲಹೆ ಸೂಚನೆ ನೀಡಿದರು.