ಜಿಲ್ಲೆ

ಮಹಾಕಾಳಿ ಕ್ಷೇತ್ರದಲ್ಲಿ ಯೋಗ ಶಿವ ನಮಸ್ಕಾರ

ಉಪ್ಪಿನಂಗಡಿ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು, ಸುಳ್ಯ, ಬಂಟ್ವಾಳ, ಉಪ್ಪಿನಂಗಡಿ ತಾಲೂಕಿನ ಯೋಗ ಬಂಧುಗಳ ಸಾಮೂಹಿಕ ಯೋಗ ಶಿವ ನಮಸ್ಕಾರ, ಶಿವಾಷ್ಟೋತ್ತರ ಶತನಾಮಾವಳಿ ಪಠಣ, ಅರ್ಚನೆ ಕಾರ್ಯಕ್ರಮ ಮುಂಜಾನೆ ನಡೆಯಿತು.

ಯೋಗ ಬಂಧುಗಳಾದ ಗಾಯತ್ರಿ, ಚಂದ್ರಾವತಿ ರೈ, ವಿಮಲಾ, ಪದ್ಮಾವತಿ, ಚಂದ್ರಾವತಿ, ಮೋಹಿನಿ, ದಯಾನಂದ ಭಜನೆ ನೆರವೇರಿಸಿದರು. ಅಮೃತ ವಚನ ವಾಚನವನ್ನು ಸುನೀತಾ, ಪಂಚಾಗ ಪಠಣವನ್ನು ರಾಜೇಂದ್ರ ಭಟ್ ನಿರ್ವಹಿಸಿದರು.

ಮಾನಸಿಕ ಸಿದ್ಧತೆಯಿಂದ ಯೋಗ ಗಣಪತಿ ನಮಸ್ಕಾರದ ಅವಧಿ ವಿವರಣೆಯನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತ್ರಾವತಿ ವಲಯ ಶಿಕ್ಷಣ ಪ್ರಮುಖರಾದ ಆರ್.ಜೆ.ಬಿರಾದಾರ್ ನಿರ್ವಹಿಸಿದರು.

ಸಾಮೂಹಿಕ ಯೋಗ ಶಿವ ನಮಸ್ಕಾರವನ್ನು ದೇವಳ ಅರ್ಚಕ ಮಧುಸೂದನ ಕಲ್ಲೂರಾಯ ಉದ್ಘಾಟಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತ ಪ್ರಮುಖ್ ರವೀಶ್, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ವೃತ್ತನಿರೀಕ್ಷಕ ರವಿ ಬಿ.ಎಸ್., ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಬೆತ್ತೋಡಿ, ನೇತ್ರಾವತಿ ವಲಯ ನಿಕಟಪೂರ್ವ ಸಂಚಾಲಕ ಗೋಕುಲನಾಥ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಾರ್ಗದರ್ಶಕರಾದ ಗೀತಾ, ಆನಂದ, ಸಂಚಾಲಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.