ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಮಲ್ಲಿಕಾಜುನ ಗಂಗೂರ, ಸಂಗಯ್ಯ ಗಡ್ಡದಮಠ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 
ಜಿಲ್ಲೆ

ಮಮದಾಪುರದಲ್ಲಿ ಯೋಗಾಭ್ಯಾಸ

ಗಿರೀಶ ಸಗರ

ವಿಜಯಪುರ: ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಶನಿವಾರ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಮಾಳಿ ಮತ್ತು ಗಿರೀಶ ಬಿರಾದಾರ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹೇಳಿದರು. ಶಾಲೆಯ 700ಕ್ಕೂ ಅಧಿಕ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಶಾಲೆಯ ಹಳೆಯ ವಿದ್ಯಾರ್ಥಿ ಅಗ್ನೀವಿರ ತಂಡಕ್ಕೆ ಆಯ್ಕೆಯಾದ ಅಂಗವಾಗಿ ಪ್ರಕಾಶ ತಾಂಬೆ ಅವರನ್ನು ಶಾಲೆ ಪರವಾಗಿ ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಮಲ್ಲಿಕಾಜುನ ಗಂಗೂರ , ಎಸ್​ಡಿಎಂಸಿ ಉಪಾಧ್ಯಕ್ಷ ಸಂಗಯ್ಯ ಗಡ್ಡದಮಠ, ಪಿಕೆಪಿಎಸ್​ ಅಧ್ಯಕ್ಷ ಬಸಪ್ಪ ಗಲಗಲಿ, ಹಿರಿಯ ಶಿಕ್ಷಕ ರಾವೇಂದ್ರ ಪುರೋಹಿತ ಮತ್ತಿತರರಿದ್ದರು.