ಜಿಲ್ಲೆ

ಯಕ್ಸಂಬಾದ ಜೊಲ್ಲೆ ಶಾಲೆಯಲ್ಲಿ ಯೋಗಾ ಯೋಗ

Belagavi - Ravi Arjun Gosavi

ಯಕ್ಸಂಬಾ : ಪಟ್ಟಣದ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಬುಧವಾರ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ್ದ
9 ನೇ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯನ್ನು ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕ ಶಶಿಕಲಾ ಜೊಲ್ಲೆ ಮತ್ತು ಕರ್ನಾಟಕ ಪ್ರಭಾರಿ ಪತಂಜಲಿ ಯೋಗ ವಿದ್ಯಾಪೀಠ ಯೋಗಾಚಾರ್ಯರಾದ ಭವರಲಾಲ ಆರ್ಯ ಹಾಗೂ ಬಸವಪ್ರಸಾದ ಜೊಲ್ಲೆ ಸಸಿಗೆ ನೀರು ಹಾಗೂ ಅಗ್ನಿಹೋತ್ರ ಮಾಡುವ ಮೂಲಕ ಚಾಲನೆ ನೀಡಿದರು.

ವಸುದೈವ ಕುಟುಂಬಕಂಕ್ಕಾಗಿ ಯೋಗ ಪ್ರತಿ ಅಂಗಳದಲ್ಲಿ ಯೋಗ ಘೋಷ ವಾಕ್ಯದೊಂದಿಗೆ ಪ್ರಾರಂಭವಾದ ಯೋಗ ದಿನಾಚರಣೆಗೆ ಸುಮಾರು 5000 ಕ್ಕಿಂತ ಹೆಚ್ಚು ಯೋಗಸಾಧಕರು ಭಾಗವಹಿಸಿದ್ದು ವಿಶೇಷ.
ಅಗ್ನಿಹೋತ್ರದಲ್ಲಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಪ್ರೀಯಾ ಜೊಲ್ಲೆ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ದುಂಡಪ್ಪ ಭೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೊಳ ಉಪಸ್ಥಿತರಿದ್ದರು.