ಜಿಲ್ಲೆ

ಯೋಗದಿಂದ ರೋಗ ದೂರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ನಿತ್ಯ ಯೋಗಾಭ್ಯಾಸದಿಂದ ರೋಗಗಳು ದೂರವಾಗಿ, ದೇಹ ಮತ್ತು ಮನಸ್ಸು ಆರೋಗ್ಯಯುತವಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಾಜು 37 ದೇಶಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಲಾಗಿದೆ. ವಿಶ್ವ ಯೋಗ ದಿನಾಚರಣೆಯ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು ಯೋಗವನ್ನು ಅಳವಡಿಸಿಕೊಂಡಿವೆ ಎಂದು ತಿಳಿಸಿದರು.

ಯೋಗದಿಂದ ಜೀವನಶೈಲಿ ಬದಲಾಗುತ್ತದೆ. ಯೋಗದ ಜತೆಗೆ ನಿಯಮಿತ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯೋಗ ಶಿಕ್ಷಕರಾದ ಸಬಿತಾ ರಾಜ್, ಗೋಪಾಲ ಖೋಡೆ, ಮಂಗಳಾ ಗೌಡ, ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ಉಮಾ ಮುಕುಂದ, ರೂಪಾ ಶೆಟ್ಟಿ, ಸೀಮಾ ಮೊಗಲಿಶೆಟ್ಟರ, ಬೀರಪ್ಪ ಖಂಡೆಕಾರ, ಮುಖಂಡರಾದ ಸಿದ್ದು ಮೊಗಲಿಶೆಟ್ಟರ, ಈಶ್ವರಗೌಡ ಪಾಟೀಲ, ಚನ್ನು ಹೊಸಮನಿ, ರವಿ ನಾಯಕ, ಅಶೋಕ ವಾಲ್ಮೀಕಿ ಹಾಗೂ ಇತರರು ಪಾಲ್ಗೊಂಡಿದ್ದರು.