ಮೈಸೂರು: ಜೀವನದಲ್ಲಿ ನಾವು ನೈತಿಕತೆ ಗಳಿಸಿಕೊಳ್ಳಬೇಕಾದರೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯುರ್ವೇದ ತಜ್ಞ ಡಾ. ಎ. ಎಸ್. ಚಂದ್ರಶೇಖರ್ ಹೇಳಿದರು.
ಮೈಸೂರು ಅಕಾಡೆಮಿ ಆಫ್ ಯೋಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಪರೋಪಕಾರಕ್ಕಾಗಿ ಈ ಶರೀರ ಎಂಬಂತೆ ನಮ್ಮನ್ನು ಸಮಾಜಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು. ಪ್ರಕೃತಿಯನ್ನು ನಾವು ಅನುಸರಿಸಿದರೆ ಮಾನವತಾವಾದವನ್ನು ಪರಿಪಾಲಿಸಿದಂತಾಗುತ್ತದೆ. ಜೀವನದಲ್ಲಿ ನಾವು ನೈತಿಕತೆ ಗಳಿಸಿಕೊಳ್ಳಬೇಕಾದರೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದೇಶಿ ವಿದ್ಯಾರ್ಥಿಗಳಾದ ಡೇವಿಡ್, ಆರ್ಥರ್ ಹಾಗೂ ಸಮಾಜ ಸೇವಕ ರಘು ಅವರನ್ನು ಸನ್ಮಾನಿಸಲಾಯಿತು. ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಟಿ. ಜಲೇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಯೋಗ ಒಕ್ಕೂಟದ ಪದಾಧಿಕಾರಿಗಳಾದ ಎಂ.ಎಸ್.ಶಿವಪ್ರಕಾಶ್, ಬಿ.ಪಿ.ಮೂರ್ತಿ, ಕೆ.ಜಿ.ದೇವರಾಜ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ, ಉದ್ಯಮಿ ದಶರಥ್, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ರಮೇಶ್ ಕುಮಾರ್ ಇತರರು ಇದ್ದರು.