ಕಡೂರಲ್ಲಿ ನಡೆದ ಯೋಗಾ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಗೆ ಅಭಿನಂದಿಸಲಾಯಿತು. ಜಿ.ಎನ್.ಕೃಷ್ಣಮೂರ್ತಿ, ಜಿಗಣೇಹಳ್ಳಿ ನೀಲಕಂಠಪ್ಪ, ಡಾ. ನಿರ್ಮಲ ರಮೇಶ್ ಇದ್ದರು. 
ಜಿಲ್ಲೆ

ಆರೋಗ್ಯದ ಬದುಕಿಗೆ ಯೋಗ ಸಹಕಾರಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಭಾರತದ ಇತಿಹಾಸದಲ್ಲಿ ಸಾವಿರಾರು ವರ್ಷಗಳ ಹಿಂದೆ ಋಷಿ ಮುನಿಗಳ ಮೂಲಕ ಪ್ರಾರಂಭವಾದ ಯೋಗ ಪರಂಪರೆ ವೈಜ್ಞಾನಿಕವಾಗಿದ್ದು, ಇಂದು ಯೋಗದ ಶಕ್ತಿ ಜಗತ್ತಿಗೆ ಪರಿಚಯವಾಗಿದೆ ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ಮಚ್ಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನಾ ಚಾಂಪಿಯನ್‌ಷಿಪ್ 2024ರ ಸಮಾರೋಪ ಸಮಾರಂಭದಲ್ಲಿ ವಿಜೇತ ಯೋಗಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜೂ.21ರಂದು ವಿಶ್ವಯೋಗ ದಿನಾಚರಣೆ ಆಚರಿಸಲು ನೀಡಿದ ಪ್ರಸ್ತಾವನೆಯನ್ನು 177 ದೇಶಗಳು ಸಕಾರಾತ್ಮಕವಾಗಿ ಒಪ್ಪಿಕೊಂಡ ಪರಿಣಾಮ ವಿಶ್ವ ಸಂಸ್ಥೆ ವಿಶ್ವಯೋಗ ದಿನ ಆಚರಿಸಲಾಗುತ್ತಿದೆ. ಮುಂದಿನ ಆರೋಗ್ಯದ ಬದುಕಿಗೆ ಯೋಗ ಹೆಚ್ಚು ಅವಶ್ಯಕವಾಗಲಿದೆ ಎಂದರು.
ವಿವಿಧ ಭಾಗಗಳಿಂದ ಭಾಗವಹಿಸಿದ ಯೋಗ ಪಟುಗಳು ವಿಭಿನ್ನ ರೀತಿಯಲ್ಲಿ ಪ್ರದರ್ಶನ ನಡೆಸಿರುವುದು ಸಂತಸತಂದಿದೆ. ಮಕ್ಕಳಿಗೆ ಬಾಲ್ಯದಲ್ಲಿ ಯೋಗದ ಮಹತ್ವ ಸಾರಿದರೆ ಮುಂದಿನ ಪೀಳಿಗೆಗೆ ಆರೋಗ್ಯದ ಕಾಳಜಿಗೆ ಭದ್ರಾ ಬುನಾದಿ ಹಾಕಿದಂತಾಗಲಿದೆ ಎಂದರು.
ಕೆಎಸ್‌ಎವೈಎಸ್‌ಎ ಅಧ್ಯಕ್ಷ ಜಿ.ಎನ್ ಕೃಷ್ಣಮೂರ್ತಿ, ಪುರಸಭೆ ಸದಸ್ಯೆ ಮಂಜುಳಾ ಚಂದ್ರು, ಕೆ.ಪ್ರಭು, ಡಾ.ಪೂರ್ಣಿಮ ದಿನೇಶ್, ಡಾ. ನಿರ್ಮಲ ರಮೇಶ್, ಅಡಕೆ ಚಂದ್ರು, ಗೀತಾ ಶ್ರೀನಾಥ್, ಎಸ್.ಬಿ. ಪೂರ್ಣೇಶ್, ಬಿ.ಎಂ.ಗಿರೀಶ್, ವಿಜಯಾಗಿರೀಶ್, ಕೆ.ಜೆ. ದರ್ಶನ್, ಎಸ್. ತೀರ್ಥಕುಮಾರ್ ಮತ್ತಿತರಿದ್ದರು.