ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ರಥಸಪ್ತಮಿ ಆಚರಣೆ ಅಂಗವಾಗಿ ಸೂರ್ಯ ನಮಸ್ಕಾರ ಮತ್ತು ಯೋಗಾಭ್ಯಾಸ ನಡೆಯಿತು. 
ಜಿಲ್ಲೆ

ಆರೋಗ್ಯ ಪೂರ್ಣ ಜೀವನಕ್ಕೆ ಯೋಗ ಅಗತ್ಯ

ಅಭಿನಯ್ ಎಚ್.ಎಂ

ಸೋಮವಾರಪೇಟೆ: ನಿರಂತರ ಯೋಗ ಕೇಂದ್ರ, ಯೋಗ ಕರ್ಮಸ್ಯ ಕೌಶಲ ಕೇಂದ್ರ, ಆಯುಷ್ ಇಲಾಖೆಯಿಂದ ರಥಸಪ್ತಮಿ ಆಚರಣೆ ಅಂಗವಾಗಿ ಪಟ್ಟಣದ ಜೂನಿಯರ್ ಕಾಲೇಜಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮಂಗಳವಾರ 108 ಸೂರ್ಯ ನಮಸ್ಕಾರ ಮತ್ತು ಯೋಗಾಭ್ಯಾಸ ಆಯೋಜಿಸಲಾಗಿತ್ತು.

ನಿರಂತರ ಯೋಗದಿಂದ ಮಾತ್ರ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ. ದೇಹದ ಆರೋಗ್ಯದೊಂದಿಗೆ ಮಾನಸಿಕ ಒತ್ತಡವೂ ನಿವಾರಣೆಯಾಗಿ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ ಎಂದು ನಿರಂತರ ಯೋಗ ಕೇಂದ್ರದ ಶಿಕ್ಷಕರಾದ ಕಿಬ್ಬೆಟ್ಟ ಗಣೇಶ್ ಹೇಳಿದರು.

ಯೋಗಾಸನಗಳು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜತೆಗೆ ನರಮಂಡಲವನ್ನು ಸಡಿಲಗೊಳಿಸುತ್ತದೆ ಎಂದು ಹೇಳಿದರು. ಜ್ಞಾನ ವಿಕಾಸ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.