ವಿಜಯವಾಣಿ ಸುದ್ದಿಜಾಲ, ಗದಗ
ಭಾರತದ ಅತ್ಯಂತ ಪುರಾತನ ಶಾಸ್ತ್ರವಾದ ಯೋಗವು ಹಲವು ದೈಹಿಕ, ಮಾನಸಿಕ ನ್ಯೂನ್ಯತೆಗಳಿಗೆ ಅತ್ಯಂತ ಸರಳ ನಿವಾರಣಾ ಮಾರ್ಗವಾಗಿದೆ. ಪ್ರಕೃತಿಯಿಂದ ದೊರಕುವ ಗಿಡಮೂಲಿಕೆಗಳು ಅನೇಕ ರೋಗಗಳಿಗೆ ಔಷಧಿಯಾಗಿ ಬಳಕೆ ಮಾಡಬಹುದು. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಸಂಜೀವ ನಾರಪ್ಪನವರ ಹೇಳಿದರು.
ನಗರದ ಜಿಸಿಟಿಎಂ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರದಿಂದ ದೊರಕುವ ಗಿಡಮೂಲಿಕೆಗಳು ನಮ್ಮ ಆರೋಗ್ಯ ರಣೆ ಮಾಡುತ್ತವೆ ಎಂದರು.
ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಎಸ್.ಎ. ದೇಶಪಾಂಡೆ ಮಾತನಾಡಿ, ಯೋಗದಿಂದ ರೋಗಗಳು ದೂರವಾಗುತ್ತವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಹೊಂದಲು ಯೋಗ ಉಪಯೋಗ ಸಾಧನ. ಯೋಗವು ಆಧ್ಯಾತ್ಮಿಕತೆ ಹಾಗೂ ಮೌಲ್ಯಯುತ ಬದುಕನ್ನು ಬೋಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಡಾ. ಭಾರ್ಗವ, ರಮೇಶ ದಿನ್ನಿ, ಕೆ. ಎಂ. ಗರಗ, ಡಾ. ಗೊಳಸಂಗಿ, ಎಸ್.ಎಂ. ದುಂದೂರ, ಸಚಿನ್ ಸತ್ಯರಡ್ಡಿ, ಎನ್. ಬಿ. ಬಾಲಪ್ಪನವರ ಇತರರು ಇದ್ದರು.