ಹಳಿಂಗಳಿ ಗ್ರಾಮದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ, ಶಸ ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಕಮರಿಮಠದ ಶಿವಾನಂದ ಶ್ರೀಗಳು ಉದ್ಘಾಟಿಸಿದರು. ಧ್ರುವ ಜತ್ತಿ, ರಾಜು ದೇಸಾಯಿ, ಮಯ್ಯಪ್ಪ್ಪ ದೇಸಾಯಿ ಇದ್ದರು. 
ಜಿಲ್ಲೆ

ಯೋಗ, ವ್ಯಾಯಾಮ ಉತ್ತಮ ಆರೋಗ್ಯದ ಗುಟ್ಟು

ರಬಕವಿ-ಬನಹಟ್ಟಿ: ಒಳ್ಳೆಯ ಆಹಾರ ಪದ್ಧತಿ ಹಾಗೂ ಯೋಗ ವ್ಯಾಯಾಮಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಶರೀರದ ಬಗ್ಗೆ ನಾವು ಕಾಳಜಿ ವಹಿಸಿದರೆ ಶರೀರವು ಕೂಡ ನಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಹಳಿಂಗಳಿ ಕಮರಿಮಠದ ಶಿವಾನಂದ ಶ್ರೀಗಳು ಹೇಳಿದರು.

ಗ್ರಾಮದ ಅಹಿಂಸಾ ಶಾಲೆಯಲ್ಲಿ ಶನಿವಾರ ಜತ್ತಿ ೌಂಡೇಷನ್ ಹಾಗೂ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡ ‘ಬೃಹತ್ ಉಚಿತ ಅರೋಗ್ಯ ತಪಾಸಣೆ ಶಸ್ತ್ರ ಚಿಕಿತ್ಸೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 5 ವರ್ಷಗಳಿಂದ ಈ ಭಾಗದಲ್ಲಿ ಅನೇಕ ರೀತಿಯ ಸಾಮಾಜಿಕ ಸೇವೆಗಳನ್ನು ಮಾಡುತ್ತ ಬಂದಿರುವ ಧ್ರುವ ಜತ್ತಿ ಯುವಕರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಸಮಾಜ ಸೇವೆ ನಡೆಸುತ್ತಿರುವುದು ಗಮನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಧ್ರುವ ಜತ್ತಿ ಮಾತನಾಡಿ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಮ್ಮ ಜತ್ತಿ ೌಂಡೇಷನ್ ಬೆಂಗಳೂರಿನ ವೈದೇಹಿ ಆಸ್ಪತ್ರೆ ಜತೆ ಕೈಜೋಡಿಸಿ ತೇರದಾಳ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದರು.

ಶಿಬಿರದಲ್ಲಿ 400 ರೋಗಿಗಳು ತಮ್ಮ ಅರೋಗ್ಯ ತಪಾಸಣೆಯನ್ನು ಮಾಡಿಕೊಂಡು ಉಚಿತ ಔಷಧ ಪಡೆದುಕೊಂಡಿದ್ದು, 50 ಜನ ಹೃದಯ ಸಂಬಂಧಿತ ಕಾಯಿಲೆ ಇರುವವರಿಗೆ ಉಚಿತವಾಗಿ ಎಲ್ಲ ಪರೀಕ್ಷೆಗಳನ್ನು ನಡೆಸಲಾಯಿತು ಎಂದರು.

ಅಹಿಂಸಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಾಜು ದೇಸಾಯಿ, ಪಿಕೆಪಿಎಸ್ ಅಧ್ಯಕ್ಷ ಮಯ್ಯಪ್ಪ ದೇಸಾಯಿ, ಆರ್.ಕೆ. ಬಿರಾದಾರ ಪಾಟೀಲ್, ಪ್ರದೀಪ ದೇಸಾಯಿ, ಪ್ರಸನ್ನ ದೇಸಾಯಿ ಇದ್ದರು.