raichur 
ಜಿಲ್ಲೆ

ಯೋಗ ದಿನ: ವಿದ್ಯಾರ್ಥಿಗಳಿಗೆ ಯೋಗ ಸ್ಪರ್ಧೆ

Raichur - Reporter - Rachhai Swamy

ರಾಯಚೂರು ನಗರದ ಆಯುಷ್ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಆಯುಷ್ ಇಲಾಖೆ , ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗದ ಮಹತ್ವವನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಯೋಗ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಅದರ ಮಹತ್ವ ಅದನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡಲ್ಲಿ ಆಗುವ ಲಾಭಗಳು, ಜೊತೆಗೆ ಅಂತರಾಷ್ಟಿಥಯ ಯೋಗ ದಿನಾಚರಣೆ ಅಂಗವಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ವರ್ಷದ ಘೋಷವಾಕ್ಯ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಆಗಿದ್ದು ವಿದ್ಯಾರ್ಥಿಗಳು ಯೋಗ ಅಭ್ಯಾಸವನ್ನು ಕಲಿಯಿರಿ ಆರೊಗ್ಯವನ್ನು ವೃದ್ದಿಸಿಕೊಳ್ಳಿರಿ ಎಂದು ತಿಳಿಸಿದರು.

ಭಾರತೀಯ ರೆಡ್‌ಕ್ರಾಸ ಸಂಸ್ಥೆಯ ಜಿಲ್ಲಾ ಸಂಚಾಲಕ ಡಾ.ದಂಡಪ್ಪ ಬಿರಾದಾರ್ ಮಾತನಾಡಿ, ವಿಶ್ವದಲ್ಲಿ ಸಾರ್ವತ್ರಿಕವಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂ.21 ರಂದು ಆಚರಣೆ ಮಾಡಲಾಗುತ್ತದೆ. ಅನಾದಿ ಕಾಲದಿಂದಲೂ ಯೋಗ ಸಾಧನೆಗೆ ಅತಿ ಮಹತ್ವವಿದೆ. ದೀರ್ಘ ಕಾಲದವರೆಗೆ ಆರೋಗ್ಯವಂತರಾಗಿ ಬಾಳಲು ಯೋಗ ಸಹಕಾರಿಯಾಗಿದೆ. ಇದೀಗ ಜಗತ್ತಿನ ನೂರಾರು ರಾಷ್ಟಗಳಲ್ಲಿ ಈ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.


ಈ ಸಂದರ್ಭದಲ್ಲಿ ಯೋಗ ತರಬೇತಿದಾರ ಡಾ.ತಿಮಪ್ಪ ವಡ್ಡೆಪಳ್ಳಿ, ಡಾ.ಪೂಜಾ, ಡಾ.ನವೀನ್, ಡಾ.ಅರ್ಪಿತಾ ಸೇರಿದಂತೆ ಅನೇಕರು ಇದ್ದರು.