ಜಿಲ್ಲೆ

ಯೋಗದಿಂದ ಸಕಾರಾತ್ಮಕ ಶಕ್ತಿ ವೃದ್ಧಿ: ವಿಜಯವಾಣಿ-ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ‌ ಕೆಎಲ್ಇ ಕ್ಯಾಂಪಸ್‌ನಲ್ಲಿ ಯೋಗಾ ಯೋಗದ ಫೋಟೋ ಝಲಕ್

ಬೆಳಗಾವಿ : ಯೋಗವು ದೈಹಿಕ ಸದೃಢತೆ ಹಾಗೂ ಮಾನಸಿಕ ಏಕಾಗ್ರತೆ ನೀಡುವುದುರ ಮೂಲಕ ಮನುಷ್ಯನಿಗೆ ಸಕಾರಾತ್ಮಕ ಶಕ್ತಿ ತರುತ್ತದೆ. ನಿತ್ಯವೂ ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ನಿತಿನ್ ಎಂ. ಗಂಗನೆ ಹೇಳಿದರು.

ಕೆಎಲ್ಇ ಹಾಗೂ ವಿಜಯವಾಣಿ ದಿಗ್ವಿಜಯ ನ್ಯೂಸ ಸಹಯೋಗದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೆಎಲ್‌ಇ ವಿಶ್ವವಿದ್ಯಾಲಯ ಹಾಗೂ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ- ದಿಗ್ವಿಜಯ್ ಸುದ್ದಿ ವಾಹಿನಿ ಸಹಯೋಗದಲ್ಲಿ ಬುಧವಾರ ಕೆಎಲ್‌ಇ ವಿವಿ ಕ್ಯಾಂಪಸ್‌ನ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮಲ್ಲಿ ಮಾತನಾಡಿದರು.

ಕೆಎಲ್‌ಇ ವಿವಿ ಕ್ಯಾಂಪಸ್‌ನ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಯೋಗಾಸನ ಮಾಡಿದರು.

ಭಾರತದ ಪ್ರಾಚೀನ ಸಾಂಪ್ರದಾಯಿಕ ಪದ್ಧತಿಯಾದ ಯೋಗವು: ‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ’ (ಎಲ್ಲರೂ ಸಂತೋಷವಾಗಲಿ ಮತ್ತು ಎಲ್ಲರೂ ರೋಗ ಮುಕ್ತರಾಗಲಿ) ಎಂಬ ಪ್ರಾಚೀನ ಪ್ರಾರ್ಥನೆಯನ್ನು ಸಾಕಾರಗೊಳಿಸಲು ಪ್ರಬಲ ಪ್ರೇರಕ ಶಕ್ತಿಯಾಗಿದೆ. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಯುತ ವ್ಯಕ್ತಿತ್ವ ಕಾಪಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯವಾಗಿರುವ ‘ವಸುಧೈವ ಕುಟುಂಬಕಂ ಗಾಗಿ ಯೋಗ’ ಎನ್ನುವುದು  ಆರೋಗ್ಯಯುತ, ಸಂತೋಷದಾಯಕ, ಶಾಂತಿಯುತ ಮತ್ತು ಕ್ರಿಯಾತ್ಮಕ ಜಗತ್ತನ್ನು ನಿರ್ಮಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾದ ಎಲ್ಲರ ನಿರಂತರ, ದಿಟ್ಟ ಮತ್ತು ಅವಿರತ ಪ್ರಯತ್ನಗಳನ್ನು ಎತ್ತಿ ಹಿಡಿಯುತ್ತದೆ ಎಂದು ಯೋಗ ದಿನಾಚರಣೆಯ ಮಹತ್ವ ತಿಳಿಸಿದರು.  

ಜೆಎನ್ಎಂಸಿ ವಿದ್ಯಾರ್ಥಿಗಳಿಂದ ಯೋಗಾಸನ

ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು   ಯೋಗಾ ಶಿಕ್ಷಕಿ ಆರತಿ ಸಂಕೇಶ್ವರಿ ಅವರ ಮಾರ್ಗದರ್ಶನದಲ್ಲಿ ವರಿಂದ ಯೋಗಾಸನ ನಡೆಸಿದರು. ವಿಭಾಗೀಯ ಪ್ರಾಣಾಯಾಮ, ಪದ್ಮಾಸನ, ವೃಕ್ಷಾಸನ, ಸರಳ ಭುಜಂಗಾಸನ, ವಜ್ರಾಸನ ಹಾಗೂ ತಾಡಾಸನ ಸೇರಿದಂತೆ ಹಲವು ಆಸನಗಳಲ್ಲಿ ಯೋಗ ಪ್ರದರ್ಶನ ನಡೆಯಿತು.  

ವಿ ಆರ್ ಎಲ್ ಮಿಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಕೆಎಲ್ಇ ಸಹಯೋಗದಲ್ಲಿ ಶಿಬಿರಾರ್ಥಿಗಳಿಗೆ ಯೋಗಪಟುಗಳು ಮಾರ್ಗದರ್ಶನ ಮಾಡಿದರು.

 ಇದೇ ಸಂದರ್ಭದಲ್ಲಿ ಭಾವಪ್ರಕಾಶ ಬುಲೆಟಿನ್ ಬಿಡುಗಡೆಗೊಳಿಸಲಾಯಿತು.  ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಐಡಿವೈ ಸಂಘಟನಾ ಕಾರ್ಯದರ್ಶಿ ಡಾ. ಸಂದೀಪ ಎಸ್. ಸಾಗರೆ ಅವರು ಯೋಗ ದಿನದ ಕುರಿತು ಮಾತನಾಡಿದರು.ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಸ್ವಯಂ ಸೇವಕರು ಪ್ರಾರ್ಥಿಸಿದರು. ಕೆಎಲ್‌ಇ ವಿವಿಯ ಕುಲಸಚಿವ ಡಾ.ವಿ.ಎ. ಕೋಟಿವಾಲೆ ಸ್ವಾಗತಿಸಿದರು. ಕೆಎಲ್‌ಇ ವಿವಿಯ ಎನ್ ಎಸ್‌ಎಸ್ ಕಾರ್ಯಕ್ರಮದ ಸಮನ್ವಯ ಅಧಿಕಾರಿ ಡಾ.ಅಶ್ವಿನಿ ನರಸಣ್ಣವರ ವಂದಿಸಿದರು.  

ಕೆಎಲ್ಇ ಡೀಮ್ಡ್ ವಿಶ್ವ ವಿದ್ಯಾಲಯದ ವಿವಿಧ ಉಪನ್ಯಾಸಕರಿಂದ ಯೋಗಾಸನ

ಡಾ.ಬಿ.ಎಂ.ಕಂಕಣವಾಡಿ ಆಯುರ್ವೇದ ಕಾಲೇಜು ಪ್ರಾಚಾರ್ಯ ಸುಹಾಸ್‌ಕುಮಾರ್ ಶೆಟ್ಟಿ, ಕೆಎಲ್‌ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಸುನೀಲ ಜಲಾಲಪುರೆ, ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸ್ಥಾನಿಕ ಸಂಪಾದಕ ರಾಯಣ್ಣ ಆರ್.ಸಿ, ಸೇರಿದಂತೆ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿಆರ್ ಎಲ್ ಮೀಡಿಯಾ ಪ್ರೈ.ಲಿ.ನ ವಿಜಯವಾಣಿ, ದಿಗ್ವಿಜಯ್ ಸುದ್ದಿವಾಹಿನಿಯ ಸಿಬ್ಬಂದಿ ಇದ್ದರು

ಯೋಗ ಶಿಕ್ಷಕಿ ಆರತಿ ಸಂಕೇಶ್ವರಿ ಅವರಿಂದ ಯೋಗ ಮಾರ್ಗದರ್ಶನ


ಕೆಎಲ್‌ಇ ಸಂಸ್ಥೆ ಹಾಗೂ ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ಸುದ್ದಿ ವಾಹಿನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಗೆ  ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ನಿತಿನ್ ಗಂಗನೆ ಚಾಲನೆ ನೀಡಿದರು. ಡಾ.ವಿ.ಎ. ಕೋಟಿವಾಲೆ, ವಿಜಯವಾಣಿ ಸ್ಥಾನಿಕ ಸಂಪಾದಕ ರಾಯಣ್ಣ ಆರ್.ಸಿ., ಡಾ.ಅಶ್ವಿನಿ ನರಸಣ್ಣವರ ಇತರರಿದ್ದರು.

ಕೆಎಲ್ಇ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ


ಕೆಎಲ್‌ಇ ಸಂಸ್ಥೆ ಹಾಗೂ ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ಸುದ್ದಿ ವಾಹಿನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ನೂರಾರು ಜನ ಯೋಗ ಪ್ರದರ್ಶಿಸಿದರು.

ಅಂತಾರಾಷ್ಟ್ರೀಯ ಯೋಗ‌ದಿನಾಚರಣೆಯಲ್ಲಿನೂರಾರು ಜನ ಯೋಗ ಪ್ರದರ್ಶನ ಮಾಡಿದರು.

ವಿವಿಧ ಯೋಗಾಸನಗಳ ಪ್ರದರ್ಶನ