ಜಿಲ್ಲೆ

ದೇಹ, ಆತ್ಮದ ಸಾಮರಸ್ಯ : ಕಾರ್ನಾಡು ಶಾಲೆಯಲ್ಲಿ ನಾರಾಯಣ ಬಣ್ಣನೆ

ಸೌಮ್ಯ ಆರ್

ಮೂಲ್ಕಿ: ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಮನಸ್ಸು ದೇಹ ಮತ್ತು ಆತ್ಮದ ಸಾಮರಸ್ಯವನ್ನು ಒಡಗೂಡಿಸುವ ಒಂದು ಸಂಪೂರ್ಣ ಜೀವನ ವಿಧಾನವಾಗಿದೆ. ಶಾಲಾ ಹಂತದಲ್ಲಿ ಯೋಗಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಬರುವ ಆರೋಗ್ಯ ಸಮಸ್ಯೆ ಪರಿಹರಿಸಬಹುದೆಂದು ಕೆಂಚನಕೆರೆ ಯೋಗ ತರಬೇತಿ ಕೇಂದ್ರದ ತರಬೇತಿ ಶಿಕ್ಷಕ ಯೋಗ ಗುರು ನಾರಾಯಣ ಹೇಳಿದರು.

ಶನಿವಾರ ಕಾರ್ನಾಡು ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಶಾಲಾ ಸಂಚಾಲಕ ರಂಜನ್ ಜತ್ತನ್ನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಶಾಂತಿ ಡೇವಿಡ್ ಕರ್ಕಡ, ಕಾರ್ಯಕ್ರಮ ಉಸ್ತುವಾರಿ ಶಿಕ್ಷಕಿ ಜಯಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಭೂಮಿಕಾ ಯೋಗದ ಪ್ರಯೋಜನಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಾದ ಆಮ್ನಾ ಮರಿಯಂ ಸ್ವಾಗತಿಸಿ. ನಸೀಲ ವಂದಿಸಿದರು, ಶಫಾ ನಿರೂಪಿಸಿದರು.