ಜಿಲ್ಲೆ

ಹುಬ್ಬಳ್ಳಿಯ ಜಿಮಖಾನಾ ಮೈದಾನದಲ್ಲಿ ಯೋಗ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ವಿಶ್ವಯೋಗ ದಿನದ ಅಂಗವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಮತಾ ಸೇವಾ ಸಂಸ್ಥೆ ಹಾಗೂ ಧನ್ಯೋಸ್ಮಿ ಯೋಗ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಜೂನ್ 21ರಂದು ಬೆಳಗ್ಗೆ 6.15ಕ್ಕೆ ಇಲ್ಲಿಯ ದೇಶಪಾಂಡೆನಗರದ ಜಿಮಖಾನಾ ಮೈದಾನದಲ್ಲಿ ಯೋಗ ದಿನ ಹಮ್ಮಿಕೊಳ್ಳಲಾಗಿದೆ.

ಮೈದಾನದಲ್ಲಿ ಬೃಹತ್ ಯೋಗ ಶಿಬಿರ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಧನ್ಯೋಸ್ಮಿ ಯೋಗ ಕೇಂದ್ರದ ಯೋಗಗುರು ವಿನಾಯಕ ತಲಗೇರಿ ಶಿಬಿರ ನಡೆಸಿಕೊಡುವರು.

ಸ್ತ್ರೀಯರು, ಪುರುಷರು ಹಾಗೂ ಎಲ್ಲ ವಯೋಮಾನದವರು ಭಾಗವಹಿಸಬಹುದಾಗಿದೆ.
ಯೋಗಾಸಕ್ತರು ಬೆಳಗ್ಗೆ 6ಕ್ಕೆ ಸಭಾಂಗಣದಲ್ಲಿ ಹಾಜರಿರಬೇಕು. ಯೋಗಮ್ಯಾಟ್ ಅಥವಾ ಚಿಕ್ಕ ಜಮಖಾನ ತರಬೇಕು ಎಂದು ಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮನವಿ ಮಾಡಿದ್ದಾರೆ.

ಯೋಗ ಶಿಬಿರದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.