ಜಿಲ್ಲೆ

ಹಿರೇಗೌಡರ ಕಾಲೇಜಿನಲ್ಲಿ ಯೋಗ ತರಬೇತಿ

Dharwada - Basavaraj Idli

ಹುಬ್ಬಳ್ಳಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಇಲ್ಲಿಯ ಉಣಕಲ್ಲ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ತರಳಬಾಳು ಪೂರ್ವ ಹಾಗೂ ಕಿರಿಯ ಆಂಗ್ಲ ಪ್ರಾಥಮಿಕ ಶಾಲೆ, ಆರ್.ಕೆ. ಕೋಕಾಟಿ ಪ್ರೌಢಶಾಲೆ, ಐ.ಜಿ. ಹಿರೇಗೌಡರ ಪದವಿ ಪೂರ್ವ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ಉಚಿತ ಯೋಗ ಶಿಕ್ಷಣ ತರಬೇತಿ ಕಾರ್ಯಕ್ರಮ ಉಣಕಲ್ಲ ‘ತರಳಬಾಳು ಕ್ಯಾಂಪಸ್’ನಲ್ಲಿ ಅ. 7ರಿಂದ 15 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ.

ಉಣಕಲ್ಲ ಓಂನಗರ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶಾಖೆಯ ಮುಖ್ಯಶಿಕ್ಷಕ ಎಂ.ಆರ್. ಹೊಳೆಣ್ಣವರ ಹಾಗೂ ಸಹ ಶಿಕ್ಷಕರಾದ ಶಿವಯೋಗಿ ಸಂಕಣ್ಣನವರ, ಕಮಲಾಕ್ಷಿ ಭಾದ್ರಾಪುರ ಅವರು ನಿತ್ಯ ಬೆಳಗ್ಗೆ 6ಕ್ಕೆ ಹಾಗೂ ಸಂಜೆ 6ಕ್ಕೆ ಉಚಿತ ಶಿಬಿರ ನಡೆಸಿಕೊಡುವರು.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಾಹಿತಿಗೆ ಶಿವಕುಮಾರಗೌಡ ಬಿ.ಜಿ. ಅವರನ್ನು ಸಂರ್ಪಸಲು ಪ್ರಕಟಣೆ ಕೋರಿದೆ.