ಜಿಲ್ಲೆ

ಪತಂಜಲಿ ಯೋಗ ಪೀಠ ಯೋಗ ಶಿಬಿರ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಶ್ವ ಸಂತ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ವಿಜಯಪುರ ಜಿಲ್ಲೆ ಅಥರ್ಗಾದ ಶ್ರೀ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದಲ್ಲಿ ಆಯೋಜಿಸಿರುವ `ಗುರು ಆರಾಧನಾ ಮಹೋತ್ಸವ'ದಲ್ಲಿ ಜ. 9ರಂದು ಬೆಳಗ್ಗೆ 7 ಗಂಟೆಗೆ ಪತಂಜಲಿ ಯೋಗ ಪೀಠ ಕರ್ನಾಟಕ ವತಿಯಿಂದ ಯೋಗ ಶಿಬಿರ ಆಯೋಜಿಸಲಾಗಿದೆ. ಪತಂಜಲಿ ಯೋಗ ಪೀಠ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅವರು ಯೋಗ ಶಿಬಿರಕ್ಕೆ ಚಾಲನೆ ನೀಡುವರು.

ಬಿಡುವಿಲ್ಲದ ಜೀವನಶೈಲಿ, ಅನಾರೋಗ್ಯಕರ ಆರೋಗ್ಯ ಪದ್ಧತಿಯಿಂದ 50 ವರ್ಷದೊಳಗಿನವರೂ ಕಾಯಿಲೆ ಪೀಡಿತರಾಗುತ್ತಿದ್ದಾರೆ. ಯುವಕರು ಕಾಳಜಿ ವಹಿಸಿ ನಿತ್ಯ ಯೋಗಾಭ್ಯಾಸ ಮಾಡಿ ಸದೃಢ ಭಾರತಕ್ಕೆ ಕೈಜೋಡಿಸಬೇಕು. ಯೋಗ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಗುರುದೇವಾಶ್ರಮದ ಶ್ರೀ ಈಶಪ್ರಸಾದ ಸ್ವಾಮೀಜಿ ತಿಳಿಸಿದ್ದಾರೆ.