ಗದಗ: ನಗರದ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುವದು. ಇಂದು ಎಲ್ಲೆಡೆಯೂ ಯೋಗವನ್ನು ಜೀವನದಲ್ಲಿ ರೂಢೀಸಿಕೊಳ್ಳುವ ಮೂಲಕ ಪ್ರತಿ ವರ್ಷ ಈ ಯೋಗ ದಿನಾಚರಣೆಯನ್ನು ಆಚರಿಸಿ ಜನಪ್ರಿಯತೆ ಮಾಡಲಾಗುತ್ತಿದೆ. ಅದೇ ರೀತಿ ಅರುಣೋದಯ ಶಾಲೆಯಲ್ಲಿಯೂ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಯೋಗ ತರಬೇತುದಾರರಾದ ಶ್ರೀಮತಿ ರೇಣುಕಾ ಕಲಬುರ್ಗಿ, ಮಮತಾ ಸತ್ಯಪ್ಪನವರ, ಕುಮಾರಿ ದಾನಮ್ಮ ಹಾಗೂ ಉದಯ ಅವರು ಅರುಣೋದಯ ಶಾಲೆಯ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹೇಳುವ ಮೂಲಕ ಮಾಡಿ ತೋರಿಸಿದರು.
ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಜಯರಾಜ ಮುಳಗುಂದ, ಸದಸ್ಯರಾದ ಬಸವರಾಜ ನಾಗಲಾಪೂರ, ಡಾ.ಉಮೇಶ ಹಾದಿ, ಶ್ರೀಮತಿ ಖುಶುಂ ಶಹಾ, ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ, ಶಿಕ್ಷಕ ಜಗದೀಶ ಹಡಪದ, ಶಿಕ್ಷಕಿಯರಾದ ಶ್ರೀಮತಿ ಜಯಶ್ರೀ ಭಾವರೆ, ಶ್ರೀಮತಿ ಪ್ರಜ್ಞಾ ರೇಣುಕಾ ದಾಸರ, ವೀಣಾ ಕೊಲ್ಲಾಪುರೆ ಅಲ್ಲದೆ ಮಲ್ಲಿಕಾರ್ಜುನ ನಾಗಲಾಪೂರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಈ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಿಹಿ ವಿತರಿಸಲಾಯಿತು.