oppo_2 
ಜಿಲ್ಲೆ

ಯೋಧ ವಿಷ್ಣು ಪುತ್ಥಳಿ ನಿರ್ಮಾಣಕ್ಕೆ ಮನವಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮುರಗೋಡ: ಅನಾರೋಗ್ಯದಿಂದ ಈಚೆಗೆ ಮೃತಪಟ್ಟ ಯೋಧ ವಿಷ್ಣು ಕಾರಜೋಳ ಅವರ ನೆನಪಿಗಾಗಿ ಗ್ರಾಮದ ಮುಖ್ಯ ವೃತ್ತದ ಬಳಿ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಮಾಜಿ ಸೈನಿಕರು ಹಾಗೂ ವಿವಿಧ ಸಂಟನೆಗಳ ವತಿಯಿಂದ ಗ್ರಾಮದಲ್ಲಿ ಉಪತಹಸೀಲ್ದಾರ್​ ಹಾಗೂ ಪಿಡಿಒಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಮಹಾಂತೇಶ ಬೇಟದ, ಚಿದಂಬರ ಮೇಟಿ ಮಾತನಾಡಿ, ಗ್ರಾಮದಲ್ಲಿ ಈಚೆಗೆ ಮೃತಪಟ್ಟ ಯೋಧ ವಿಷ್ಣು ಕಾರಜೋಳ ಅವರ ಪುತ್ಥಳಿ ನಿರ್ಮಿಸಬೇಕು. ಇದರಿಂದ ಯುವ ಪೀಳಿಗೆಗೆ ಮಾದರಿಯಾಗುತ್ತದೆ. ಎಲ್ಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್​ ಡಿ.ಬಿ.ಅಲ್ಲಯ್ಯನವಮಠ, ಪಿಡಿಒ ಡಿ.ಎಸ್​.ಕಂಕಣ್ಣವರ, ಗ್ರಾಮಸ್ಥರ ಮನವಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಮಾಜಿ ಸೈನಿಕರಾದ ಟೇಪ್ಪ ರಗಟಿ, ಮಲ್ಲಪ್ಪ ಯರಜರವಿ, ಶ್ರೀಕಾಂತ ಕಾರಿ, ನಾಗಪ್ಪ ಕಾರಿ, ಮಹಾಂತೇಶ ಸೊಗಲದ, ಬಂಡುರಾವ್​ ಕುಲಕರ್ಣಿ, ಬಸಯ್ಯ ಶಿವಪ್ಪನವಮಠ, ಶ್ರೀಕಾಂತ ಮಲಕಾಜನವರ, ಮಹಾಂತೇಶ ಬಡಿಗೇರ ಇತರರಿದ್ದರು.