Oplus_0 
ಜಿಲ್ಲೆ

ವಿದ್ಯುತ್ ತಂತಿ ಸ್ಪರ್ಶ ವ್ಯಕ್ತಿ ಸಾವು

ಎ. ಆರ್. ರಘುರಾಮ

ಯಳಂದೂರು : ತಾಲೂಕಿನ ಅಂಬಳೆ ಗ್ರಾಮದ ಪ್ರಮುಖ ರಸ್ತೆ ಬದಿಯ ಲಿಂಗಾಯತ ಬಡಾವಣೆಯಲ್ಲಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನು ಕೈ ಯಿಂದ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ತಾಲೂಕಿನ ಕಂದಹಳ್ಳಿ ಗ್ರಾಮದ ನಾಗರಾಜು (28) ಮೃತರು. ಇವರು ಅಂಬಳೆ ಗ್ರಾಮದ ಮಾಸ್ಟರ್ ವಿಶ್ವನಾಥ್ ಎಂಬುವರ ಮನೆಯ ಮೇಲೆ ತೆರಳಿ ಬದಿಯಲ್ಲಿ ಹಾದಿ ಹೋಗಿರುವ 11 ಕೆವಿ ಲೈನ್ ವಿದ್ಯುತ್ ತಂತಿಯನ್ನು ಕೈ ಯಿಂದ ಸ್ಪರ್ಶ ಮಾಡಿದ್ದಾರೆ. ಇದಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಶಾಕ್ ಹೊಡೆದು ಸ್ಥಳದಲ್ಲೇ ಮೃತರಾದ ಬಗ್ಗೆ ನಿವಾಸಿಗಳು ಯಳಂದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.

ಸಬ್ ಇನ್ಸ್‌ಪೆಕ್ಟರ್ ಆಕಾಶ್ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.