ಚನ್ನರಾಯಪಟ್ಟಣ: ಯಲಿಯೂರು ಗ್ರಾಮ ಪಂಚಾಯಿ ಕೇಂದ್ರ ಸ್ಥಾನದಲ್ಲೇ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಜನರು ಸಾಂಕ್ರಾಮಿಕ ರೋಗ ಭೀತಿ ಎದುರಿಸುವಂತಾಗಿದೆ.
ಈ ಗ್ರಾಪಂ ದೇವನಹಳ್ಳಿ ತಾಲೂಕಿನಲ್ಲೇ ಸಂಪೂರ್ಣ ಸ್ವಚ್ಛತಾ ಯೋಜನೆಗೆ ಭಾಜನದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಪರ್ಯಾಸವೆಂದರೆ ಯಲಿಯೂರು ಗ್ರಾಪಂ ಕೇಂದ್ರ ಕಚೇರಿಯಲ್ಲೇ ಚರಂಡಿಗಳು ಅನೈರ್ಮಲ್ಯದ ಆಗರವಾಗಿವೆ.
ಸ್ವಚ್ಛಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ನಿರಂತರವಾಗಿ ದೂರು ನೀಡುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅನೈರ್ಮಲ್ಯದಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವಂತಾಗಿದೆ. ಮಳೆ ಬಂದರೆ ಮನೆಗೆ ನುಗುವ ಕೊಳಚೆ!: ಬೇಸಿಗೆಯಲ್ಲಿ ಚರಂಡಿ ದುರ್ನಾತ ಅನುಭವಿಸುವ ಕರ್ಮ ಒಂದಡೆಯಾದರೆ ಮಳೆಗಾಲದ ವೇಳೆ ಚರಂಡಿಯ ಕೊಳಚೆ ಜತೆಗೆ ಮಳೆ ನೀರು ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ.
ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿಲ್ಲ. ಕೊಳಚೆ ತುಂಬಿರುವ ಕಾರಣ ಚರಂಡಿ ದುರ್ನಾತ ಬೀರುತ್ತಿದೆ. ಉತ್ಪತ್ತಿಯಾಗುವ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಭೀತಿ ಇದೆ. ಇತ್ತ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಮುಕ್ತಿ ನೀಡಲಿ. ಎ.ಅನಂದ್ ಯಲಿಯೂರು ಎಂಪಿಸಿಎಸ್ ಮಾಜಿ ಅಧ್ಯಕ್ಷ ಸಂಪೂರ್ಣ ಸ್ವಚ್ಛತಾಗ್ರಾಮದಲ್ಲಿ ಯಲಿಯೂರು ಗ್ರಾಮ ಫಂಚಾಯಿತಿಗೆ ಮೂಲ ಸೌಕರ್ಯಕ್ಕಾಗಿ ಬಂದ ಹಣ ಏನಾಗಿದೆ? ಸೌಕರ್ಯ ಕಲ್ಪಿಸದ ಮೇಲೆ ತೆರಿಗೆ ವಸೂಲಿ ಪಂಚಾಯಿತಿಗೆ ಅಗತ್ಯವಿದೆಯೇ? ಚರಂಡಿಯಲ್ಲಿ ಕುಡಿಯುವ ನೀರಿನ ಕೊಳಾಯಿ ಹಾಕಿದ್ದಾರೆ. ವೈ.ಸಿ. ಶಾಂತಕುಮಾರ್ ಯಲಿಯೂರು ಯಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಹಳೆಯ ಪಿಡಿಒ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಹೊಸದಾಗಿ ಪಿಡಿಒ ನೇಮಕ ಮಾಡಲಾಗಿದೆ. ಸೋಮವಾರ ಗ್ರಾಪಂಗೆ ಭೇಟಿ ನೀಡಿ ಗ್ರಾಮಗಳ ಕುಂದುಕೊರತೆ ಬಗೆಹರಿಸಲಾಗುವುದು. ಮುರುಡಯ್ಯ ತಾಪಂ ಕಾರ್ಯನಿರ್ವಹಣಾಧಿಕಾರಿ ಯಲಿಯೂರಲ್ಲಿ ಕಸದ ರಾಶಿ ತುಂಬಿರುವುದು.