ಜಿಲ್ಲೆ

ಬದಲಾದ ಸರ್ವೇ ನಂಬರ್ ಸರಿಪಡಿಸಿ

ಶ್ರೀನಾಥ

ಯಲಬುರ್ಗಾ: ತಾಲೂಕಿನ ತರಲಕಟ್ಟಿ ಗ್ರಾಮದ ಜಮೀನುಗಳ ಸ.ನಂ. ಅದಲು-ಬದಲಾಗಿದ್ದು, ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಪಟ್ಟಣದ ತಹಸಿಲ್ ಕಚೇರಿ ಮುಂದೆ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು.

ಸ.ನಂ.35ರ ವ್ಯಾಪ್ತಿಯಲ್ಲಿರುವ 12 ಎಕರೆ ಜಮೀನು 31ನೇ ಸ.ನಂ.ಗೆ ಸೇರ್ಪಡೆಯಾಗಿದ್ದು, ರೈತರಿಗೆ ಸಾಕಷ್ಟು ತೊಂದರೆಯಾಗಿದೆ. 31ರ ಬದಲಾಗಿ 35ಕ್ಕೆ ಸೇರ್ಪಡೆ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಕ್ರಮವಹಿಸಿಲ್ಲ.

ಇದರಿಂದ ಬೆಳೆವಿಮೆ, ಬ್ಯಾಂಕ್ ಸಾಲ ಇತರ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಕ್ರಮಕ್ಕೆ ಮುಂದಾಗಬೇಕಾದ ಅಧಿಕಾರಿಗಳು ಸಲ್ಲದ ಕಾರಣ ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ವಿಷಯವನ್ನು ಶಾಸಕ ಬಸವರಾಜ ರಾಯರಡ್ಡಿ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಧರಣಿನಿರತರು ಆರೋಪಿಸಿದರು.

ಸ.ನಂ.31ಕ್ಕೆ ಸೇರ್ಪಡೆಯಾದ ಜಮೀನನ್ನು ಸ.ನಂ.35ಕ್ಕೆ ವರ್ಗಾಹಿಸುವುದರ ಜತೆಗೆ ರೈತರಿಗೆ ಫಾರ್ಮ್ ನಂಬರ್-10 ಮಾಡಿಕೊಡಬೇಕು. ಅಧಿಕಾರಿಗಳು ಸಮಸ್ಯೆ ಪರಿಹರಿಸುವಲ್ಲಿ ಅನವಶ್ಯಕ ವಿಳಂಬ ಮಾಡಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪೋಟೋ(21ವೈಎಲ್‌ಬಿ02)

ಬದಲಾಗಿರುವ ಸರ್ವೇ ನಂಬರ್ ಸರಿಪಡಿಸಿಕೊಡುವಂತೆ ಒತ್ತಾಯಿಸಿ ತರಲಕಟ್ಟಿ ಗ್ರಾಮದ ರೈತರು ಯಲಬುರ್ಗಾ ತಹಸಿಲ್ ಕಚೇರಿ ಮುಂದೆ ಸೋಮವಾರದಿಂದ ಆಹೋರಾತ್ರಿ ಧರಣಿ ಆರಂಭಿಸಿದರು. ರೈತರಾದ ಶರಣಪ್ಪ ಹುಳ್ಳಿ, ಸೋಮನಾಥ ಹುಳ್ಳಿ, ಶಂಕ್ರಪ್ಪ ಕಂಬಳಿ, ನಿರುಪಾದಿ, ಹನುಮಂತಪ್ಪ ಕಂಬಳಿ, ಕರೇಗೌಡ ಕಂಬಳಿ, ಮಂಜುನಾಥ, ಮಲ್ಲಪ್ಪ ಕಂಬಳಿ, ವಿಠೋಬ ಇತರರಿದ್ದರು.