ಯಲಬುರ್ಗಾ: ಕೊಪ್ಪಳದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ತಾಲೂಕಿನ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಸತಿ ಶಾಲೆಯ ಗೈಡ್ ವಿದ್ಯಾರ್ಥಿನಿಯರಾದ ಶುಭಪ್ರಿಯಾ ಲಮಾಣಿ, ವೈಶಾಲಿ ರಾಠೋಡ್, ವಾಣಿ ಬಿರಾದಾರ್, ನಂದಾ ಬೆನಕನಹಳ್ಳಿ, ಆಶಾಲತಾ ಮೂಲಿಮನಿ, ಪೂಜಾ ಕಡೆಮನಿ, ಶಂಕ್ರಮ್ಮ ಆದಾಪುರ, ಐಶ್ವರ್ಯಾ ಜರಕುಂಟಿ ಇವರು ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಕೊಪ್ಪಳ ಜಿಲ್ಲಾ ಸೌಟ್ಸ್ ಸಂಸ್ಥೆಯ ಶರೀಫ್‌ಸಾಬ್ ಹತ್ತಿ ಮತ್ತೂರ್, ರೇಣುಕಾ ಪಾಟೀಲ್, ಶಾಂತವೀರಯ್ಯ ಬಲವಂಚಿಮಠ, ಕಳಕೇಶ್ ಅರಕೇರಿ ಇದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.