ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ್ ಕೊರ್ಲಳ್ಳಿ ಉದ್ಘಾಟಿಸಿದರು. ಪ್ರಾಚಾರ್ಯ ಕೆ.ಎಚ್.ಛತ್ರದ, ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಲ್ಮೀಕೆಪ್ಪ ಯಕ್ಕರನಾಳ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಲಕ್ಷ್ಮೀ ಮಹಾಂತೇಶ ಛಲವಾದಿ, ಜಯಶ್ರೀ ಕಂದಕೂರ, ಬಸವರಾಜ ಒಂಟೇಲಿ, ವಿಕಾಸ ಉಳ್ಳಾಗಡ್ಡಿ, ಕಳಕಪ್ಪ ಸೂಡಿ ಇತರರಿದ್ದರು. 
ಜಿಲ್ಲೆ

ಪರಂಪರೆ ಮುಂದುವರಿಯಲಿ

ಯಲಬುರ್ಗಾ: ಯುವಕರು ಪಾಶ್ಚಾತ್ಯ ಶೈಲಿಗೆ ಒಳಗಾಗಿ ನಮ್ಮ ಸಂಸ್ಕೃತಿ, ಸಾಹಿತ್ಯ, ಸಂಗೀತ ಹಾಗೂ ಭಾರತೀಯ ಪರಂಪರೆ ಮರೆಯುತ್ತಿರುವುದು ವಿಷಾದನೀಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ್ ಕೊರ್ಲಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿದ್ದಯ್ಯ ಪುರಾಣಿಕ ಸಭಾ ಭವನದಲ್ಲಿ ಸಾಂಸ್ಕೃತಿಕ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದ ಕಲೆ, ಸಂಸ್ಕೃತಿ ಹಿಂದಿನಿಂದಲೂ ಜೀವನಕ್ಕೆ ಸಂಬಂಧಿಸಿದೆ. ಇಂದಿನ ಮಕ್ಕಳು ಜನಪದ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ವಾದ್ಯಗಳನ್ನು ನುಡಿಸುತ್ತಾ ಕುಂಭ ಮೇಳದೊಂದಿಗೆ ಉಪನ್ಯಾಸಕರು, ಸಿಬ್ಬಂದಿ ವಿವಿಧ ಜನಪದ ಕಲೆಗಳೊಂದಿಗೆ ಭಾರತೀಯ ಶೈಲಿಯ ಉಡುಗೆಗಳನ್ನು ತೊಟ್ಟು ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿದರು.

ಪ್ರಾಚಾರ್ಯ ಕೆ.ಎಚ್.ಛತ್ರದ, ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಲ್ಮೀಕೆಪ್ಪ ಯಕ್ಕರನಾಳ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಲಕ್ಷ್ಮೀ ಮಹಾಂತೇಶ ಛಲವಾದಿ, ಜಯಶ್ರೀ ಕಂದಕೂರು, ಬಸವರಾಜ ಒಂಟೇಲಿ, ವಿಕಾಸ ಉಳ್ಳಾಗಡ್ಡಿ, ಕಳಕಪ್ಪ ಸೂಡಿ, ರೇವಣೆಪ್ಪ ಹಿರೇಕುರುಬರ ಇತರರಿದ್ದರು.