ಯಲಬುರ್ಗಾ ತಾಲೂಕಿನ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದಂತ ತಪಾಸಣೆ ಕಾರ್ಯಕ್ರಮದಲ್ಲಿ ಡಾ.ಎಂ. ಮಾರುತಿ ಮಾತನಾಡಿದರು. ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ನರ್ಸಿಂಗ್ ಆಫೀಸರ್ ಮಲ್ಲಿಕಾರ್ಜುನ ಅಂಗಡಿ. ಶಿಕ್ಷಕ ಪುರುಷೋತ್ತಮ್ ಪೂಜಾರ್ ಇದ್ದರು.  
ಜಿಲ್ಲೆ

ಆರೋಗ್ಯ ಕಾಳಜಿ ಎಲ್ಲರಲ್ಲೂ ಇರಲಿ

ಯಲಬುರ್ಗಾ: ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದಲ್ಲಿ ಮಾತ್ರ ಜೀವನ ಸುಖಮಯವಾಗಿರುತ್ತದೆ ಎಂದು ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯ ಹಿರಿಯ ದಂತ ವೈದ್ಯ ಡಾ.ಎಂ. ಮಾರುತಿ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ದಂತ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಐಸಿಟಿಸಿ ಸಮಾಲೋಚಕ ಕಾಳಪ್ಪ ಬಡಿಗೇರ್, ಎಚ್‌ಐವಿ, ಏಡ್ಸ್ ಕುರಿತು, ಶರಣಪ್ಪ ಉಪ್ಪಾರ್ ಅವರು ಡೆಂೆ ಜ್ವರ, ಮಂಜುನಾಥ್ ಹಿರೇಮನಿ ಅವರು ಮಲೇರಿಯಾ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ನರ್ಸಿಂಗ್ ಆಫೀಸರ್ ಮಲ್ಲಿಕಾರ್ಜುನ ಅಂಗಡಿ. ಶಿಕ್ಷಕರಾದ ಪುರುಷೋತ್ತಮ್ ಪೂಜಾರ್, ವಿಜಯಕುಮಾರ್ ದೊಡ್ಡಮನಿ, ರಾಜೇಶ್ವರಿ ಬಿರಾದಾರ್, ಮಂಜುಳಾ ನರೇಂದ್ರ, ಶಿವಲೀಲಾ ಜಕ್ಕಲಿ, ಫಾತಿಮಾ ಬೆಟಗೇರಿ ಬಿ.ಇಡಿ ಪ್ರಶಿಕ್ಷಣಾರ್ಥಿ ಬಸವರಾಜ್ ಮುಗನೂರ್ ಉಪಸ್ಥಿತರಿದ್ದರು.