ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ವೃತ್ತಿ ಯೋಜನಾ ತರಬೇತಿ ಕಾರ್ಯಾಗಾರವನ್ನು ಸಮನ್ವಯ ಅಧಿಕಾರಿ ಹಮೀದ್ ಅತ್ತಾರ್ ಉದ್ಘಾಟಿಸಿದರು. ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್ ಯಾದವ್, ನಿಂಗಣ್ಣ ಎಸ್, ಫಾತಿಮಾ, ವೈಶಾಲಿ, ಪುರುಷೋತ್ತಮ್ ಪೂಜಾರ್, ಶಂಕರ ಇಂಗಳಹಾಳ ಇತರರಿದ್ದರು.  
ಜಿಲ್ಲೆ

ಪಠ್ಯ ಸ್ವಾವಲಂಬನೆ ಬದುಕಿಗೆ ಪ್ರೇರಣೆ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಶಾಲಾ ಹಂತದ ಪಠ್ಯಕ್ರಮದಲ್ಲಿ ವಿವಿಧ ವೃತ್ತಿಗಳ ಕುರಿತು ಪರಿಚಯಿಸುವುದರಿಂದ ಮಕ್ಕಳ ಸ್ವಾವಲಂಬನೆ ಬದುಕಿಗೆ ಪ್ರೇರಣೆಯಾಗಲಿದೆ ಎಂದು ವಸತಿ ಶಾಲೆಗಳ ಕೊಪ್ಪಳ ಜಿಲ್ಲಾ ಸಮನ್ವಯ ಅಧಿಕಾರಿ ಹಮೀದ್ ಅತ್ತಾರ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಸತಿ ಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಂಡ ವೃತ್ತಿ ಯೋಜನಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಷನ್ ಬೆಂಗಳೂರು ಇದರ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ಶರಣ ಮಾತನಾಡಿ, ಮಕ್ಕಳಿಗೆ ವೃತ್ತಿ ಯೋಜನಾ ಮಾರ್ಗದರ್ಶನ ನೀಡುವುದರಿಂದ ಸಾಧನೆ ಮಾಡಲು ಪ್ರೇರಣೆಯಾಗಿದೆ ಎಂದರು.

ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್ ಯಾದವ್, ನಿಂಗಣ್ಣ ಎಸ್, ಫಾತಿಮಾ, ವೈಶಾಲಿ, ಪುರುಷೋತ್ತಮ್ ಪೂಜಾರ್, ಶಂಕರ ಇಂಗಳಹಾಳ ಇತರರಿದ್ದರು.